ಇತರೆ
ಕುಂದಾಪುರ:ಬ್ಯಾರಿಕೇಡ್‌ಗೆ ಲಾರಿ ಡಿಕ್ಕಿ ಚಾಲಕ ಸಾವು
Views: 200
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ಸಂಗಮ್ ಜಂಕ್ಷನ್ ನಲ್ಲಿ ರವಿವಾರ ಬ್ಯಾರಿಕೇಡ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತ ಪಟ್ಟಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ರವಿಪ್ರಕಾಶ್ (46) ಮೃತ ಲಾರಿ ಚಾಲಕ.
ಉಡುಪಿಯಿಂದ ಬೈಂದೂರು ಕಡೆಗೆ ಸಾಗುತ್ತಿದ್ದ ಲಾರಿ ಸಂಗಮ್ ಜಂಕ್ಷನ್ ಸಮೀಪ ಬರುತ್ತಿರುವಂತೆ ನಿಧಾನಗತಿ ಕಂಡಿದ್ದು, ಅಲ್ಲೇ ಇದ್ದ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ನಂತರ ಡಿವೈಡರ್ ಬಳಿಯ ಸಿಸಿಟಿವಿ ಕ್ಯಾಮೆರಾಕ್ಕೆ ಗುದ್ದಿ ನಿಂತಿದೆ.
ಸ್ಥಳೀಯರು ಹೋಗಿ ನೋಡುವಾಗ ಚಾಲಕ ಅಸ್ವಸ್ಥಗೊಂಡಿರುವುದು ಕಂಡು ಬಂದಿದೆ. ಬಾಯಲ್ಲಿ ನೊರೆ ಬರುತ್ತಿತ್ತು. ಕೂಡಲೆ ಅವರನ್ನು ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರು ಮೃತ ಪಟ್ಟಿರುವುದಾಗಿ ಪರೀಕ್ಷಿಸಿದ ವೈದ್ಯರು ಘೋಷಿಸಿದ್ದಾರೆ.
ಲಾರಿ ಚಲಾಯಿಸುವಾಗ ಹೃದಯಾ ಘಾತವಾಗಿ ಅಥವಾ ಇನ್ಯಾವುದೋ ಅನಾರೋಗ್ಯದ ಕಾರಣ ಮೃತಪಟ್ಟಿರ ಬಹುದೆಂದು ಶಂಕಿಸಲಾಗಿದೆ.
ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






