ಇತರೆ

ಗಾನವಿ ಆತ್ಮಹತ್ಯೆ ಕೇಸ್ಗೆ ಬಿಗ್ ಟ್ವಿಸ್ಟ್.. ಸೂರಜ್ ಸಾವಿಗೆ ಗಾನವಿ ಮೇಲೆ ಆರೋಪಗಳೇನು?

Views: 255

ಕನ್ನಡ ಕರಾವಳಿ ಸುದ್ದಿ: ಗಾನವಿ ಸೂಸೈಡ್‌ ಕೇಸ್‌ ದಿನಕ್ಕೊಂದು ರೋಚಕ ಟ್ವಿಸ್ಟ್ ಆ್ಯಂಡ್ ಟರ್ನ್ ಪಡೆದುಕೊಳ್ಳುತ್ತಿದೆ. ಬಿಗ್ ಟ್ವಿಸ್ಟ್ ಎಂಬಂತೆ ಗಾನವಿ ಪತಿ ಸೂರಜ್ ಸೂಸೈಡ್ ಮಾಡ್ಕೊಂಡಿದ್ದ. ಜೊತೆಗೆ ಅತ್ತೆಯೂ ಆತ್ಮಹತ್ಯೆಗೆ ಯತ್ನಿಸಿದ್ರು. ಇದೀಗ ಸೂರಜ್ ಕುಟುಂಬಸ್ಥರು ಗಾನವಿ ಸೇರಿ ಒಟ್ಟು 8 ಜನ್ರ ವಿರುದ್ಧ ದೂರು ದಾಖಲಿಸಿದ್ದು, ಗಾನವಿ ವಿರುದ್ಧವೇ ಸಾಲು ಸಾಲು ಆರೋಪಿಗಳನ್ನು ಹೊರಿಸಿದ್ದಾರೆ.

ನಮ್ಮ ಮನೆ ಮಗ ಸೂರಜ್ ಮತ್ತೆ ಸೂರಜ್ ತಾಯಿಯ ಸಾವು ಬದುಕಿನ ಹೋರಾಟಕ್ಕೆ ಗಾನವಿ ಮತ್ತು ಗಾನಮಿ ಕುಟುಂಬಸ್ಥರೇ ಕಾರಣ ಅಂತ ಮೃತ ಸೂರಜ್ ಸಂಬಂಧಿ ರಾಜ್ಕುಮಾರ್ ಅನ್ನೋರು ವಿದ್ಯಾರಣ್ಯಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗಾನವಿ ವಿರುದ್ಧವೇ ಸಾಲು ಸಾಲು ಆರೋಪ ಮಾಡಿದ್ದಾರೆ.

ಸೂರಜ್ ಸಾವಿಗೆ ಏನು ಕಾರಣ?

ಗಾನವಿ ಕುಟುಂಬಸ್ಥರು ಗಾನವಿ ಒಪ್ಪಿಗೆ ಪಡೆಯದೇ ಬಲವಂತದಿಂದ ಸೂರಜ್ ಜೊತೆ ಮದುವೆ ಮಾಡಿದ್ದರಂತೆ ಜೊತೆಗೆ ಈ ಮದುವೆಯನ್ನು ಸೂರಜ್ ಮನೆಯವರೆ ಖರ್ಚುಮಾಡಿ ಮಾಡಿದ್ದರಂತೆ. ಇದಿಷ್ಟೇ ಅಲ್ಲದೆ ಗಾನವಿ- ಶ್ರೀ ಹರ್ಷ ಅನ್ನೋ ವ್ಯಕ್ತಿಯನ್ನು ಪ್ರೀತಿಸ್ತಿದ್ಲಂತೆ ಈ ವಿಚಾರವನ್ನು ಸೂರಜ್ ಬಳಿಯೂ ಹೇಳಿ ಮದುವೆಯಾಗ್ತೀನಿ ಅಂತ ಹೇಳಿದ್ದಾಳೆ.. ಅದೇ ವಿಚಾರಕ್ಕೆ ಇಬ್ಬರು ಶ್ರೀಲಂಕಾದಿಂದ 25 ರ ಬದಲು ಡಿಸೆಂಬರ್ 21 ರಂದು ವಾಪಸ್ ಆಗಿದ್ರು. ಡಿಸೆಂಬರ್ 22 ರಂದು ಗಾನವಿಯನ್ನು ಅವರ ಕುಟುಂಬಸ್ಥರು ಬಂದು ಕರೆದುಕೊಂಡು ಹೋಗಿದ್ರು. ಅದಾಗಿ ಡಿಸೆಂಬರ್ 24 ರಂದು ಗಾನವಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.. ಆದ್ರೆ ಇದಕ್ಕೆಲ್ಲ ಮೃತ ಸೂರಜ್ ಕುಟುಂಬಸ್ಥರೇ ಕಾರಣ ಅಂತ ಆಕೆಯ ಹೆತ್ತವರು ಮೀಡಿಯಾದಲ್ಲಿ ಹೇಳಿಕೆಗಳನ್ನ ನೀಡಿದ್ದರು. ಈ ಅವಮಾನಕರ ಹೇಳಿಕೆಗಳಿಗೆ ಮನನೊಂದು ಸೂರಜ್ ಹಾಗೂ ಅವರ ತಾಯಿ ಹಾಗೂ ಸಹೋದರ ನಾಗಪುರಕ್ಕೆ ಹೋಗಿದ್ರು.. ಅಲ್ಲಿ ಮನನೊಂದಿದ್ದ ಸೂರಜ್ ಸೂಸೈಡ್ ಮಾಡಿದ್ದಾನೆ.. ಅವರ ತಾಯಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಈ ಅವ್ರ ಕಂಡಿಷನ್ಸ್ ಕ್ರಿಟಿಕಲ್ ಆಗಿದೆ. ಹೀಗಾಗಿ ಇದಕ್ಕೆಲ್ಲ ಗಾನವಿ ಕುಟುಂಬಸ್ಥರೇ ಕಾರಣ ಅಂತ ಆರೋಪಿಸಿ ದೂರು ದಾಖಲಿಸಿದ್ದಾರೆ.

ಒಟ್ಟಾರೆ, ಸಾವೇ ಎಲ್ಲದಕ್ಕೂ ಪರಿಹಾರವಲ್ಲ, ಉತ್ತರವೂ ಅಲ್ಲ. ಎರಡು ಜೀವಗಳು ಇಲ್ಲಿ ಬಲಿಯಾಗಿ ಹೋಗಿವೆ.. ಆದ್ರೀಗ ಈ ಆರೋಪಕ್ಕೆ ಮೃತ ಗಾನವಿ ಕುಟುಂಬಸ್ಥರು ಯಾವ ರೀತಿ ಉತ್ತರ ನೀಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ..

Related Articles

Back to top button
error: Content is protected !!