ಇತರೆ
ಕುಂದಾಪುರ: ಕೊರ್ಗಿಯಲ್ಲಿ ತೆಂಗಿನ ಕಾಯಿ ಕೊಯ್ಯುವ ಕೆಲಸಕ್ಕೆ ಹೋದಾಗ ಯುವಕ ಕುಸಿದು ಬಿದ್ದು ಸಾವು
Views: 414
ಕನ್ನಡ ಕರಾವಳಿ ಸುದ್ದಿ: ತೆಂಗಿನ ಕಾಯಿ ಕೊಯ್ಯುವ ಕೆಲಸಕ್ಕೆ ಹೋದಾಗ ಯುವಕ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಕುಂದಾಪುರ ತಾಲೂಕಿನ ಕೊರ್ಗಿಯಲ್ಲಿ ನಡೆದಿದೆ.
ಕೂಲಿ ಕಾರ್ಮಿಕ ಸಂದೀಪ (30) ಮೃತಪಟ್ಟವರು.
ಅವರು ಡಿ. 27ರ ಸಂಜೆ ತೋಟವೊಂದಕ್ಕೆ ತೆಂಗಿನ ಕಾಯಿ ಕೊಯ್ಯುವ ಕೆಲಸಕ್ಕೆ ಹೋದವರು ನಿಂತಲ್ಲೇ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಬಿದ್ದಿರುವ ಅವರು ಉಸಿರಾಡಲು ಕಷ್ಟಪಡುತ್ತಿರುವುದನ್ನು ಗಮನಿಸಿದ ಜತೆಗಿದ್ದವರು ಕೂಡಲೇ ಕುಂದಾಪುರದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಪರೀಕ್ಷಿಸಿದ ವೈದ್ಯರು ಅದಾಗಲೇ ಸಾವನ್ನಪ್ಪಿರುವುದಾಗಿ ತಿಳಿಸಿದರು.
ಸಹೋದರ ಅಣ್ಣಪ್ಪ ಅವರು ನೀಡಿದ ದೂರಿನಂತೆ ಕುಂದಾ ಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






