ಜನಮನ
ಸವಿತಾ ಎರ್ಮಾಳ್ ಅವರಿಗೆ ಶಿಕ್ಷಣ ಜ್ಞಾನ ಪತ್ರಿಕೆಯ ರಾಜ್ಯಮಟ್ಟದ ಪ್ರಶಸ್ತಿ
Views: 42
ಕನ್ನಡ ಕರಾವಳಿ ಸುದ್ದಿ:ಬ್ರಹ್ಮಾವರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಸವಿತಾ ಎರ್ಮಾಳ್ ಅವರಿಗೆ ಶಿಕ್ಷಣ ಜ್ಞಾನ ಪತ್ರಿಕೆಯ ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಶಿಕ್ಷಣ ಸಂಜೀವಿನಿ ಪ್ರಶಸ್ತಿ ಪುರಸ್ಕೃತರಾಗಲಿರುವ ಸವಿತಾ ಎರ್ಮಾಳ್ ಅವರು ಬಾರ್ಕೂರು ಚೌಳಿಕೇರಿ ಶ್ರೀ ಕುಮಾರಸ್ವಾಮಿ ಅವರ ಪತ್ನಿ
ಡಿಸೆಂಬರ್ 21ರಂದು ಹಾಸನದಲ್ಲಿ ನಡೆಯುವ ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು.
ಇದೇ ಸಂದರ್ಭದಲ್ಲಿ ಪ್ರೌಢಶಾಲಾ ವಿಭಾಗದಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್ ವಂಡ್ಸೆಯ ಕನ್ನಡ ಭಾಷಾ ಶಿಕ್ಷಕ ಶ್ರೀ ರವಿರಾಜ ಶೆಟ್ಟಿ, ಪ್ರಾಥಮಿಕ ಶಾಲಾ ವಿಭಾಗದಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೊಳಹಳ್ಳಿಯ ಶೋಭಾ ಸಿ ಶೆಟ್ಟಿ ಹಾಗೂ ಪೂರ್ವ ಪ್ರಾಥಮಿಕ ವಿಭಾಗದಿಂದ ಗಂಗೊಳ್ಳಿ ಅಂಗನವಾಡಿ ಶಿಕ್ಷಕಿ ಫಿಲೋಮಿನಾ ಫೆರ್ನಾಂಡಿಸ್ ಆಯ್ಕೆಯಾಗಿದ್ದಾರೆ.






