ಯುವಜನ
ಯಾಣಕ್ಕೆ ಪ್ರವಾಸಕ್ಕೆ ಹೊರಟಿದ್ದ ವೈದ್ಯಕೀಯ ವಿದ್ಯಾರ್ಥಿ ಬೈಕ್ ಅಪಘಾತದಲ್ಲಿ ಸಾವು
Views: 203
ಕನ್ನಡ ಕರಾವಳಿ ಸುದ್ದಿ: ಯಾಣಕ್ಕೆ ಪ್ರವಾಸಕ್ಕೆ ಹೊರಟಿದ್ದ ಹುಬ್ಬಳ್ಳಿ ಯ ವೈದ್ಯಕೀಯ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿಗಳ ಬೈಕ್ ತಾಲೂಕಿನ ಕಣ್ಣಿಗೇರಿ ಬಳಿ ಅಪಘಾತಕ್ಕೀಡಾಗಿದೆ. ಪರಿಣಾಮ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಸ್ಥಳದಲ್ಲಿಯೇ ಸಾವನಪ್ಪಿದ ಘಟನೆ ನಡೆದಿದೆ.
ವೈದ್ಯಕೀಯ ಕಾಲೇಜಿನ ನಾಲೈದು ವಿದ್ಯಾರ್ಥಿಗಳು ಶನಿವಾರ ಯಾಣಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ತಾಲೂಕಿನ ಕಣ್ಣಿಗೇರಿ ಗ್ರಾಮದ ಎಚ್ ಕೆ ಜಿ ಎನ್ ಸಿಮೆಂಟ್ ಪಾಕ್ಟರಿ ಬಳಿ ವಿದ್ಯಾರ್ಥಿ ರಾಜೀವ ಚೌದರಿ ಚಲಾಯಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಬಿದ್ದು ಬೈಕಿನಲ್ಲಿ ಹಿಂದೆ ಕೂತಿದ್ದ ಯಾದಗಿರಿಯ ವರ್ಧನ ಶೆಟ್ಟಿ (19) ಅವರ ತಲೆ ಹೆದ್ದಾರಿಗೆ ಬಡಿಯಿತು. ಆ ತೀವ್ರತೆಗೆ ವರ್ಧನ ಶೆಟ್ಟಿ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಅಪಘಾತದ ವಿಷಯ ತಿಳಿದು ಸ್ಥಳಕ್ಕೆ ಪಿಐ ರಮೇಶ ಹಾನಾಪುರ ಪಿಎಸೈ ಸಿದ್ದಪ್ಪ ಗುಡಿ ತೆರಳಿ ಗಾಯಗೊಂಡು ಬಿದ್ದಿದ್ದ ರಾಜೀವ ಚೌದರಿ ಅವರನ್ನು ಆಸ್ಪತ್ರೆಗೆ ದಾಖಲಿಸಿದರು. .






