ಜನಮನ
ಬ್ರಹ್ಮಾವರ: ಪಿಡಬ್ಲ್ಯೂಡಿ ಗುತ್ತಿಗೆದಾರ ಬೈಕಾಡಿ ಜೀವನ್ ಶೆಟ್ಟಿ ನಿಧನ
Views: 214
ಕನ್ನಡ ಕರಾವಳಿ ಸುದ್ದಿ: ಬ್ರಹ್ಮಾವರದ ಹೆಸರಾಂತ ಪಿಡಬ್ಲ್ಯೂಡಿ ಗುತ್ತಿಗೆದಾರ ಬೈಕಾಡಿ ಜೀವನ್ ಶೆಟ್ಟಿ (51) ಅವರು ಸೋಮವಾರ ರಾತ್ರಿ ನಿಧನ ಹೊಂದಿದರು.
ಕೆಲವು ಸಮಯಗಳಿಂದ ಅಸೌಖ್ಯದಿಂದ ಬಳಲುತ್ತಿದ್ದರು.ಹೆಸರಾಂತ ಗುತ್ತಿಗೆದಾರರಾದ ಇವರು ಉತ್ತಮ ಕಾಮಗಾರಿಕೆಗಳನ್ನು ನಿರ್ಮಿಸಿದ್ದು, ಸರಳ, ಸ್ನೇಹಮಯಿ ಜೀವಿಯಾಗಿದ್ದರು. ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರೋತ್ಸಾಹಕರಾಗಿದ್ದರು.






