ಜನಮನ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಭಾರಿ ಮಳೆ ಮುನ್ಸೂಚನೆ 

Views: 125

ಕನ್ನಡ ಕರಾವಳಿ ಸುದ್ದಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ  ಉಂಟಾಗಿದ್ದು, ಡಿಟ್ವಾ ಚಂಡಮಾರುತವಾಗಿ ರೂಪುಗೊಂಡಿದೆ. ಇದರಿಂದಾಗಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಡಿಟ್ವಾ ಚಂಡಮಾರುತದ ಪರಿಣಾಮ ಮುಂದಿನ 2-3 ದಿನಗಳವರೆಗೆ ತಮಿಳುನಾಡು, ಆಂಢ್ರಪ್ರದೇಶದ ಉತ್ತರ ಹಾಗೂ ಇತರ ಭಾಗಗಳಲ್ಲಿ ಭಾರಿ ಮಳೆಯಾಗಲಿದೆ. ಚಂಡಮಾರುತವು ಉತ್ತರ ತಮಿಳುನಾಡು, ಪುದುಚೇರಿ, ದಕ್ಷಿಣ ಆಂಧ್ರಪ್ರದೇಶದ ಕರಾವಳಿಯ ಕಡೆಗೆ ಸಾಗುತ್ತಿದ್ದು, ನವೆಂಬರ್ 30ರವರೆಗೆ ಮಳೆಯಾಗಲಿದೆ.

ಶ್ರೀಲಂಕಾದ ಪೊಟ್ಟುವ್ಲ್ ಬಳಿ ಚಂಡಮಾರುತ ರೂಪುಗೊಂಡಿದೆ. ನಾಳೆಯಿಂದ ಎರಡುದಿನಗಳ ಕಾಲ ಕೇರಳ, ಮಾಹೆಯಲ್ಲಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿಯೂ  ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Related Articles

Back to top button
error: Content is protected !!