ನ.28 ಉಡುಪಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿ: ಪ್ರಮುಖ ರಸ್ತೆಗಳ ಸಂಚಾರ ಬದಲಾವಣೆ
Views: 83
ಕನ್ನಡ ಕರಾವಳಿ ಸುದ್ದಿ: ಪ್ರಧಾನಿ ನರೇಂದ್ರ ಮೋದಿ ಅವರು ನ.28ರಂದು ಉಡುಪಿಗೆ ಆಗಮಿಸುವ ಹಿನ್ನೆಲೆಯಲ್ಲಿ ಬೆಳಿಗ್ಗೆ 9:00ರಿಂದ ಅಪರಾಹ್ನ 3:00 ಗಂಟೆಯವರೆಗೆ ಸಂಚಾರ ನಿಷೇಧ ಹಾಗೂ ಬದಲಿ ಮಾರ್ಗದ ಕುರಿತು ಜಿಲ್ಲಾಡಳಿತ ಅಧಿಸೂಚನೆಯನ್ನು ಹೊರಡಿಸಿದೆ.
> ಆದಿಉಡುಪಿ ಹೆಲಿಪ್ಯಾಡ್ನಿಂದ ಕರಾವಳಿ ಜಂಕ್ಷನ್-ಬನ್ನಂಜೆ-ಶಿರಿಬೀಡು- ಕಲ್ಸಂಕ- ಶ್ರೀಕೃಷ್ಣ ಮಠದವರೆಗೆ ಯಾವುದೇ ವಾಹನಗಳ ಸಂಚಾರ ಹಾಗೂ ಪಾರ್ಕಿಂಗ್ ಅನ್ನು ನಿಷೇಧಿಸಲಾಗಿದೆ.
> ಮಣಿಪಾಲದಿಂದ ಉಡುಪಿ ಕಡೆಗೆ ಬರುವ ಎಲ್ಲಾ ವಾಹನಗಳು ಶಾರದಾ ಕಲ್ಯಾಣ ಮಂಟಪ- ಬೀಡಿನಗುಡ್ಡೆ ಮಾರ್ಗವಾಗಿ ಉಡುಪಿಗೆ ಬರಬೇಕು.
> ಕುಂದಾಪುರದಿಂದ ಉಡುಪಿ ಕಡೆಗೆ ಬರುವ ವಾಹನಗಳು ಕರಾವಳಿ ಪ್ರೈ ಓವರ್- ಅಂಬಲಪಾಡಿ- ಬ್ರಹ್ಮಗಿರಿ- ಜೋಡುಕಟ್ಟೆ ಮಾರ್ಗವಾಗಿ ಉಡುಪಿಗೆ ಬರಬೇಕು.
> ಮಂಗಳೂರಿನಿಂದ ಉಡುಪಿ ಕಡೆಗೆ ಬರುವ ವಾಹನಗಳು ಕಿನ್ನಿಮುಲ್ಕಿ ಸ್ವಾಗತಗೋಪುರ- ಜೋಡುಕಟ್ಟೆ ಮಾರ್ಗವಾಗಿ ಉಡುಪಿಗೆ ಬರಬೇಕು.
> ಅಂಬಾಗಿಲಿನಿಂದ ಗುಂಡಿಬೈಲ್ ಮಾರ್ಗವಾಗಿ ಉಡುಪಿಗೆ ಬರುವ ಎಲ್ಲಾ ವಾಹನಗಳು ಗುಂಡಿಬೈಲ್ ರಸಿಕಾ ಬಾರ್ ಮೂಲಕ ದೊಡ್ಡಣಗುಡ್ಡೆ -ಎಂಜಿಎಂ- ಎಸ್ಕೆಎಂ- ಬೀಡಿನಗುಡ್ಡೆ ಮಾರ್ಗವಾಗಿ ಉಡುಪಿಗೆ ಬರಬೇಕು.
> ಮಲ್ಪೆಯಿಂದ ಬರುವ ಎಲ್ಲಾ ವಾಹನಗಳು ಕುತ್ಪಾಡಿ ಮಾರ್ಗವಾಗಿ ಅಂಬಲಪಾಡಿ ಮೂಲಕ ಉಡುಪಿಗೆ ಬರಬೇಕು.
ಈ ಬದಲಿ ಮಾರ್ಗವು ನ.28ರ ಶುಕ್ರವಾರ ಬೆಳಗ್ಗೆ 9:00ರಿಂದ ಅಪರಾಹ್ನ 3:00ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ಈ ನಿಷೇಧವು ವಿವಿಐಪಿ ವಾಹನ, ಸರಕಾರಿ ವಾಹನ ಹಾಗೂ ಎಲ್ಲಾ ರೀತಿಯ ತುರ್ತುಸೇವೆಗಳ ವಾಹನಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.






