ಜನಮನ

ನಾಪತ್ತೆಯಾಗಿದ್ದ ಯುವಕರ ಶವ ಕೆರೆಯಲ್ಲಿ ಅನುಮಾನಾಸ್ಪದವಾಗಿ ಪತ್ತೆ

Views: 75

ಕನ್ನಡ ಕರಾವಳಿ ಸುದ್ದಿ: ನಗರ ಕುಂದುವಾಡ ಕೆರೆಯಲ್ಲಿ ಇಬ್ಬರು ಯುವಕರ ಶವ ಅನುಮಾನಾಸ್ಪದವಾಗಿ ಪತ್ತೆಯಾಗಿದೆ.

ಶಾಂತಿನಗರದ ಚೇತನ್ (22), ಮನು (23) ಮೃತ ದುರ್ದೈವಿಗಳು. ಇಬ್ಬರು ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದರು. ಇಂದು (ನ.25) ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಇಬ್ಬರ ಶವಗಳು ಕೆರೆಯಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿವೆ.

ಯುವಕರು ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ರಾ ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ವಿದ್ಯಾನಗರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

 

 

Related Articles

Back to top button
error: Content is protected !!