ಪ್ರವಾಸೋದ್ಯಮ

ಮಹಿಳಾ ಪೈಲೆಟ್ ಮೇಲೆ ಸಹೋದ್ಯೋಗಿಯಿಂದ ಅತ್ಯಾಚಾರ

Views: 130

ಕನ್ನಡ ಕರಾವಳಿ ಸುದ್ದಿ: ಬೆಂಗಳೂರು ಖಾಸಗಿ ವಿಮಾನಯಾನ ಸಂಸ್ಥೆಯ ಪೈಲಟ್ ಬೆಂಗಳೂರಿನ ಖಾಸಗಿ ಹೊಟೆಲ್ ನಲ್ಲಿ ಮಹಿಳಾ ಸಿಬ್ಬಂದಿ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂಬ ಗಂಭೀರ ಆರೋಪ ಹೊರಿಸಲಾಗಿದೆ.

ನವೆಂಬರ್‌ 18ರಂದು ಬೆಂಗಳೂರಿನಲ್ಲಿ ಘಟನೆ ನಡೆದಿದ್ದು,ಬೇಗಂಪೇಟೆ ಠಾಣೆಯಲ್ಲಿ ಝೀರೊ ಎಫ್‌ಐಆರ್‌ (ಬೇರೊಂದು ಠಾಣೆಯ ವ್ಯಾಪ್ತಿಯಲ್ಲಿ ನಡೆದ ಅಪರಾಧದ ದೂರು) ದಾಖಲಾಗಿದೆ.

‘ಬೆಂಗಳೂರಿನಿಂದ ಮರಳಿದ ನಂತರ ಸಂತ್ರಸ್ತೆ, ಇಲ್ಲಿನ ಠಾಣೆಗೆ ಬಂದು ದೂರು ನೀಡಿದ್ದಾರೆ. ನಾವು ಪ್ರಕರಣ ದಾಖಲಿಸಿಕೊಂಡು ಅದನ್ನು ಬೆಂಗಳೂರಿನ ಹಲಸೂರು ಪೊಲೀಸ್‌ ಠಾಣೆಗೆ ವರ್ಗಾಯಿಸಿದ್ದೇವೆ. ಬೆಂಗಳೂರಿನ ಪೊಲೀಸರು ತನಿಖೆ ನಡೆಸಲಿದ್ದಾರೆ’ ಎಂದು ಬೇಗಂಪೇಟೆ ಠಾಣೆಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದರು.

ಮೂಲಗಳ ಪ್ರಕಾರ ನವೆಂಬರ್ 18 ರಂದು ಆರೋಪಿ ಪೈಲಟ್ ರೋಹಿತ್ ಸರನ್ ತನ್ನ ಸಹೋದ್ಯೋಗಿ ಸಂತ್ರಸ್ಥೆ ಜೊತೆ ಹೈದರಾಬಾದ್‌ನ ಬೇಗಂಪೇಟೆ ಮತ್ತು ಆಂಧ್ರಪ್ರದೇಶದ ಪುಟ್ಟಪರ್ತಿಯಿಂದ ಚಾರ್ಟರ್ಡ್ ವಿಮಾನದಲ್ಲಿ ಹೋಟೆಲ್‌ಗೆ ಆಗಮಿಸಿದಾಗ ಈ ಘಟನೆ ನಡೆದಿದೆ.

ಇಬ್ಬರು ಪೈಲಟ್‌ಗಳು ಮತ್ತು ಸಂತ್ರಸ್ಥೆ ನವೆಂಬರ್ 19 ರಂದು ಪುಟ್ಟಪರ್ತಿಗೆ ಹಿಂತಿರುಗಬೇಕಿತ್ತು ಮಾರ್ಗ ಮಧ್ಯೆ ಸ್ವಲ್ಪ ವಿಶ್ರಾಂತಿಗಾಗಿ ಹೋಟೆಲ್‌ಗೆ ಬಂದಿದ್ದರು.

ತನ್ನ ದೂರಿನಲ್ಲಿ, ರೋಹಿತ್ ಧೂಮಪಾನಕ್ಕಾಗಿ ಹೊರಗೆ ಹೋಗುವ ನೆಪದಲ್ಲಿ ತನ್ನ ಹೋಟೆಲ್ ಕೋಣೆಯ ಬಳಿಗೆ ಕರೆದೊಯ್ದಿದ್ದಾನೆ ಎಂದು ಆರೋಪಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಬಲವಂತವಾಗಿ ಕೋಣೆಯೊಳಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.

ನವೆಂಬರ್ 20 ರಂದು ಬೇಗಂಪೇಟೆಗೆ ಹಿಂತಿರುಗಿದ ನಂತರ, ಸಂತ್ರಸ್ಥೆ ತಕ್ಷಣ ವಿಮಾನಯಾನ ಸಂಸ್ಥೆಯ ಆಡಳಿತವನ್ನು ಸಂಪರ್ಕಿಸಿ ಬೇಗಂಪೇಟೆ ಪೊಲೀಸ್ ಠಾಣೆಯಲ್ಲಿ  ಎಫ್‌ಐಆರ್ ದಾಖಲಿಸಿದ್ದಾಳೆ.

 

Related Articles

Back to top button
error: Content is protected !!