ಜನಮನ

ಮಂಗಳೂರಿನ ಜಯಶ್ರೀ ಉಳ್ಳಾಲ್ ಭಾರತದ ಶ್ರೀಮಂತ ಮಹಿಳಾ ಉದ್ಯಮಿ!

Views: 119

ಕನ್ನಡ ಕರಾವಳಿ ಸುದ್ದಿ:ಮಂಗಳೂರು ಮೂಲದ ಜಯಶ್ರೀ ಉಳ್ಳಾಲ್ ಅವರು ಬರೋಬ್ಬರಿ 50,170 ಕೋಟಿ ರೂಪಾಯಿಗಳ ಆಗರ್ಭ ಶ್ರೀಮಂತ ಮಹಿಳಾ ಉದ್ಯಮಿ ಯಾಗಿದ್ದಾರೆ.

ಈ ಬೃಹತ್ ಸಂಪತ್ತಿನೊಂದಿಗೆ ‘ಹುರುನ್ ರಿಸರ್ಚ್ ಇಂಡಿಯಾ ಬಿಡುಗಡೆ ಮಾಡಿರುವ ಶ್ರೀಮಂತರ ಪಟ್ಟಿ 2025ರಲ್ಲಿ ಭಾರತ ಮೂಲದ ಅತ್ಯಂತ ಶ್ರೀಮಂತ ಮಹಿಳಾ ಉದ್ಯಮಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಜಯಶ್ರಿ ಉಳ್ಳಾಲ್ ಅವರು ಲಂಡನ್‌ ನಲ್ಲಿ ಜನಿಸಿದ್ದು, ಅಮೆರಿಕದ ಪೌರತ್ವ ಹೊಂದಿದ್ದಾರೆ. ಇವರ ತಂದೆ ತಾಯಿ ಮೂಲತಃ ಭಾರತದವರಾಗಿದ್ದಾರೆ. ಮಂಗಳೂರಿನ ಜಿಎಸ್‌ಬಿ ಸ್ಮಾರ್ತ ಚಿತ್ರಾಪುರ ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಜಯಶ್ರೀ ಉಳ್ಳಾಲ್, ಭಾರತೀಯ ಮೂಲದ ಅತ್ಯಂತ ಗೌರವಾನ್ವಿತ ಜಾಗತಿಕ ಉದ್ಯಮ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

ಅಮೆರಿಕ ಮೂಲದ ಕಂಪ್ಯೂಟರ್ ನೆಟ್‌ವರ್ಕಿಂಗ್ ದೈತ್ಯ ‘ಅರಿಸ್ಟಾ ನೆಟ್‌ವರ್ಕ್ಸ್’ನ ಅಧ್ಯಕ್ಷೆ ಮತ್ತು ಸಿಇಒ ಆಗಿ 2008ರಿಂದ ಕಾರ್ಯನಿರ್ವಹಿಸುತ್ತಿರುವ ಜಯಶ್ರೀ, ದೇಶದ ಅಗ್ರ 10 ಸ್ವಯಂ-ನಿರ್ಮಿತ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ. ಅವರ ನಾಯಕತ್ವದಲ್ಲಿ, ಅರಿಸ್ಟಾ ಕಂಪನಿಯು ಕಳೆದ ವರ್ಷ 7 ಬಿಲಿಯನ್ ಡಾಲರ್ ಆದಾಯ ಗಳಿಸಿದ್ದು, ಹಿಂದಿನ ವರ್ಷಕ್ಕಿಂತ ಶೇ. 20ರಷ್ಟು ಬೆಳವಣಿಗೆ ದಾಖಲಿಸಿದೆ.

ಜಯಶ್ರೀ ಉಳ್ಳಾಲ್ ಅವರು ಐದು ವರ್ಷಗಳ ಹಿಂದೆ ಸಾರ್ವಜನಿಕವಾಗಿ ನೋಂದಣಿಯಾದ ಕ್ಲೌಡ್ ಕಂಪ್ಯೂಟಿಂಗ್ ಕಂಪನಿ ‘ಸ್ನೋಫ್ಲೇಕ್’ನ ನಿರ್ದೇಶಕ ಮಂಡಳಿಯಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಅರಿಸ್ಟಾ ನೆಟ್‌ವರ್ಕ್ಸ್‌ನ ಸುಮಾರು ಶೇ. 3ರಷ್ಟು ಷೇರುಗಳನ್ನು ಹೊಂದಿದ್ದು, ಅದರಲ್ಲಿ ಕೆಲವು ಅವರ ಇಬ್ಬರು ಪುತ್ರಿಯರು, ಸೊಸೆ ಮತ್ತು ಸೋದರಳಿಯನ ಹೆಸರಿನಲ್ಲಿವೆ. ಈ ಹಿಂದೆ ಅವರು ಸಿಸ್ಕೋ ಸಿಸ್ಟಮ್ಸ್, ಅಡ್ವಾನ್ಸ್ಡ್ ಮೈಕ್ರೋ ಡಿವೈಸಸ್ (AMD) ಮತ್ತು ಫೇರ್‌ಚೈಲ್ಡ್ ಸೆಮಿಕಂಡಕ್ಟರ್‌ನಂತಹ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Articles

Back to top button
error: Content is protected !!