ಜನಮನ

ಕುಂದೇಶ್ವರ ದೀಪೋತ್ಸವ ಪ್ರಯುಕ್ತ ಕುಂದಾಪುರದ ಸರ್ಕಲ್ ನಿಂದ- ಹೊಸ ಬಸ್‌ ಸ್ಟ್ಯಾಂಡ್ ತನಕ ವಾಹನ ಸಂಚಾರ ನಿಷೇಧ 

Views: 167

ಕನ್ನಡ ಕರಾವಳಿ ಸುದ್ದಿ: ಕುಂದಾಪುರದ ಕುಂದೇಶ್ವರ ದೇವಸ್ಥಾನದ ದೀಪೋತ್ಸವ ನ.19 ಬುಧವಾರ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಸಹಸ್ರಾರು ಭಕ್ತಾದಿಗಳು ಭಾಗವಹಿಸುವುದರಿಂದ ಕುಂದಾಪುರದ ಶಾಸ್ತ್ರಿ ಪಾರ್ಕ್‌ನಿಂದ ಹೊಸ ಬಸ್‌ ಸ್ಟ್ಯಾಂಡ್ ತನಕ ಸಂಜೆ 5ಗಂಟೆಯಿಂದ ಕುಂದಾಪುರದ ಮುಖ್ಯರಸ್ತೆಯಲ್ಲಿ ಜನ ಸಂಚಾರ ಇರುವುದರಿಂದ ಈ ಸಮಯ ಕುಂದಾಪುರ ಮುಖ್ಯ ರಸ್ತೆಗೆ ಬರುವ ಎಲ್ಲಾ ಬಸ್ ಹಾಗೂ ಇತರ ವಾಹನಗಳೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಕುಂದಾಪುರ ನೆಹರೂ ಮೈದಾನ, ಎಪಿಎಂಸಿ ಕಚೇರಿಯ ಮುಂಭಾಗ ಖಾಲಿ ಜಾಗದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದು, ಯಾರು ಸಹ ತಮ್ಮ ವಾಹನವನ್ನು ಕುಂದಾಪುರ ಮುಖ್ಯ ರಸ್ತೆ ಒಳಗೆ ಬರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಕುಂದಾಪುರ ನಗರ ಠಾಣೆ ಮತ್ತು ಕುಂದಾಪುರ ಸಂಚಾರ ಠಾಣೆಯ ಪ್ರಕಟಣೆ ತಿಳಿಸಿದೆ.

Related Articles

Back to top button
error: Content is protected !!