ಕ್ರೀಡೆ

ರಾಷ್ಟ್ರ ಮಟ್ಟದ ಈಜು ಸ್ಪರ್ಧೆಗೆ ಕುಂದಾಪುರದ ರಿಶಾಂತ್ ಖಾರ್ವಿ ಆಯ್ಕೆ

Views: 22

ಕನ್ನಡ ಕರಾವಳಿ ಸುದ್ದಿ :ನವೆಂಬರ್ 30 ರಿಂದ ಡಿಸೆಂಬರ್ 5ರವರೆಗೆ ದೆಹಲಿಯಲ್ಲಿನೆಡೆಯುವ ರಾಷ್ಟ್ರ ಮಟ್ಟದ ಈಜು ಸ್ಪರ್ಧೆಯಲ್ಲಿ 14ವರ್ಷದ ಒಳಗಿನ ವಯೋಮಿತಿಯ ವಿಭಾಗದಲ್ಲಿ ರಿಶಾಂತ್ ಖಾರ್ವಿ ಆಯ್ಕೆಯಾಗಿದ್ದಾರೆ.

ಇವರು ಮೂಲತಃ ಕುಂದಾಪುರದವರಾದ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಖ್ಯಾತ ಈಜು ತರಬೇತುದಾರ ದಯಾನಂದ ಖಾರ್ವಿ ಮತ್ತು ಚಿತ್ರಲೇಖಾ ಅವರ ಪುತ್ರ ಬಾಲ್ಯದಿಂದಲೇ ಈಜಿನಲ್ಲಿ ಆಸಕ್ತಿ ಹೊಂದಿದ್ದ ರಿಶಾಂತ್ ತನ್ನ ತಂದೆಯ ಈಜಿನ ಶೈಲಿಯಿಂದ ಪ್ರೇರಿತನಾಗಿ ತಂದೆಯನ್ನೇ ಗುರುವಾಗಿ ಸ್ವೀಕರಿಸಿ, ಈಜು ಕಲಿತ ಕಠಿಣ ಪರಿಶ್ರಮಿ ಬೆಂಗಳೂರಿನ ಆಸು ಪಾಸಿನಲ್ಲಿ ನೆಡೆದ ಬಹತೇಕ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು, ಪ್ರಸಿದ್ದಿಯನ್ನು ಪಡೆದು ಉತ್ತಮ ಈಜುಪಟುವೆಂದು ಖ್ಯಾತಿ ಪಡೆದಿದ್ದಾರೆ.

14 ರಿಂದ 17 ವರ್ಷದ ವಯೋಮಾನದ ವಿಭಾಗದಲ್ಲಿ ಇತ್ತೀಚಿಗೆ ಮೈಸೂರಿನಲ್ಲಿ ನೆಡೆದ ರಾಜ್ಯ ಮಟ್ಟದ ಈಜು ಮತ್ತು ಡೈವಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ ರಿಶಾಂತ್ 200ಮೀ ವೈಯುಕ್ತಿಕ ಮಿಡ್ಲೆ ಮತ್ತು 4×100 ರಿಲೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಮತ್ತು 200ಮೀ ಬಟರ್ ಪ್ರೈ ಮತ್ತು 400ಮೀ ಪ್ರೀ ಸ್ಟೈಲ್‌ನಲ್ಲಿ ಬೆಳ್ಳಿ ಪದಕವನ್ನು ಪಡೆದು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದಾರೆ

Related Articles

Back to top button
error: Content is protected !!