ಯುವಜನ

ಸ್ನಾನಕ್ಕೆಂದು ತೆರಳಿದ ಬಾಲಕ ಶವವಾಗಿ ಪತ್ತೆ 

Views: 48

ಕನ್ನಡ ಕರಾವಳಿ ಸುದ್ದಿ: ಸ್ನಾನಕ್ಕೆಂದು ತೆರಳಿ ನಾಪತ್ತೆಯಾಗಿದ್ದ ಬಾಲಕ ಶವವಾಗಿ ನಾಪತ್ತೆಯಾದ ಘಟನೆ ಪೆರ್ಡೂರುನಲ್ಲಿ ನಡೆದಿದೆ.

ಅಲಂಗಾರು ನಿವಾಸಿ ಶ್ರೀಶಾನ್ ಶೆಟ್ಟಿ (15) ಮೃತಪಟ್ಟವರು.

ಭಾನುವಾರ ತನ್ನ ಮಿತ್ರನ ಜೊತೆ ಸ್ನಾನಕ್ಕೆಂದು ನದಿಗೆ ಹೋಗಿದ್ದ. ಸ್ನಾನ ಮಾಡುವ ಸಂದರ್ಭ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದ. ಇದರಿಂದ ಭಯಗೊಂಡ ಆತನ ಸ್ನೇಹಿತ ಈ ವಿಚಾರವನ್ನು ಮುಚ್ಚಿಟ್ಟಿದ್ದ. ಮನೆಯವರು ರಾತ್ರಿಯವರೆಗೂ ಹುಡುಕಿದರು ಬಾಲಕ ಪತ್ತೆಯಾಗಲಿಲ್ಲ.

ಪೊಲೀಸರು ಶ್ರೀಶಾನ್ ಶೆಟ್ಟಿಯ ಮಿತ್ರನನ್ನು ವಿಚಾರಿಸಿದಾಗ ಆತ ನಡೆದ ವಿಚಾರವನ್ನು ವಿವರಿಸಿದ್ದಾನೆ. ಈ ಬಗ್ಗೆ ಹಿರಿಯಡಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button