ಇತರೆ

ಮಗಳ ಶವಸಂಸ್ಕಾರಕ್ಕೆ ಲಂಚ ಕೇಳಿದ ಕಾನ್‌ಸ್ಟೆಬಲ್, ಪಿಎಸ್‌ಐ ಅಮಾನತು

Views: 91

ಕನ್ನಡ ಕರಾವಳಿ ಸುದ್ದಿ: ಮಗಳ ಸಾವಿನ ನೋವಿನಲ್ಲಿದ್ದರೂ ಸಹ ಆಂಬ್ಯುಲೆನ್ಸ್, ಬೆಳ್ಳಂದೂರು ಠಾಣೆಯ ಪೊಲೀಸ್ ಸಿಬ್ಬಂದಿ, ಮರಣ ಪ್ರಮಾಣಪತ್ರ ಪಡೆಯಲು ಪಾಲಿಕೆ ಸಿಬ್ಬಂದಿ ಮತ್ತು ಶವಸಂಸ್ಕಾರದವರೆಗೆ ಪ್ರತೀ ಹಂತದಲ್ಲಿಯೂ ಬೆಂಗಳೂರಿನಲ್ಲಿ ಲಂಚ ನೀಡಬೇಕಾಯಿತು ಎಂದು ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್‌ನ (ಬಿಪಿಸಿಎಲ್) ನಿವೃತ್ತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಎಫ್‌ಒ) ಶಿವಕು ಮಾರ್ ಕೆ.ಎಂಬುವವರು ಸಾಮಾಜಿಕ ಜಾಲತಾಣ ಪೋಸ್ಟ್ ಮಾಡಿ ವಿವರಿಸಿದ್ದಾರೆ.

ಮಾಜಿ ಸಿಎಫ್‌ಒ ಶಿವಕುಮಾರ್ ಅವರ ಪೋಸ್ಟ್: 34 ವರ್ಷದ ತಮ್ಮ ಏಕೈಕ ಪುತ್ರಿ ಅಕ್ಷಯಾ ಟ್ರೈನ್ ಹ್ಯಾಮರೇಜ್ ಕಾರಣ ದಿಂದ ಇತ್ತೀಚಿಗೆ ಮೃತಪಟ್ಟಿದ್ದಳು. ಆ ಸಂದರ್ಭದಲ್ಲಿ ಶವ ಸಾಗಿಸಲು ಆಂಬ್ಯು ಲೆನ್ಸ್ ವಾಹನಕ್ಕೆ ಲಂಚ ನೀಡಬೇಕಾಯಿತು. ಮಗಳ ಶವದ ಮರಣೋತ್ತರ ಪರೀಕ್ಷೆ ನಡೆಸಿ ವರದಿ ನೀಡಲು ಕೂಡಾ ಲಂಚ ಕೇಳಿದರು. ಎಫ್‌ಐಆರ್ ದಾಖಲಿಸಿಕೊಳ್ಳಲು ಬೆಳ್ಳಂದೂರು ಠಾಣೆಯ ಪೊಲೀಸರು ಲಂಚ ಕೇಳಿದರು. ಬೆಳ್ಳಂದೂರು ಠಾಣೆಯ ಇನ್ಸ್‌ಪೆಕ್ಟರ್ ಅಹಂಕಾರದಿಂದ ವರ್ತಿಸಿದರು. ಶವ ಸಂಸ್ಕಾರ ಮಾಡಲು ಚಿತಾಗಾರಕ್ಕೆ ಹೋದಾಗ ಅಲ್ಲಿಯೂ ಲಂಚ ನೀಡ ಬೇಕಾಯಿತು. ಮಗಳ ಡೆತ್ ಸರ್ಟಿಫಿಕೇಟ್ ಪಡೆಯಲು ಕೂಡಾ ಪಾಲಿಕೆಯ ಅಧಿಕಾರಿಗಳಿಗೂ ಲಂಚ ಕೊಡಬೇಕಾಯಿತು. ಮಗಳನ್ನು ಕಳೆದುಕೊಂಡ ತಂದೆಯ ಬಗ್ಗೆ ಯಾರೊಬ್ಬರಿಗೂ ಸಹಾನುಭೂತಿ ಇರಲಿಲ್ಲ. ನನ್ನ ಬಳಿ ಕೊಡಲು ಹಣವಿತ್ತು. ಆದರೆ ಬಡವರು ಏನು ಮಾಡುತ್ತಾರೆ? ಎಂದು ಶಿವಕುಮಾ‌ರ್ ಬರೆದಿದ್ದಾರೆ.

ಕಾನ್‌ಸ್ಟೆಬಲ್ ಪಿಎಸ್‌ಐ ಅಮಾನತು

ಶಿವಕುಮಾ‌ರ್ ಅವರ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬೆಳ್ಳಂದೂರು ಠಾಣೆಯ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (ಪಿಎಸ್‌ಐ) ಸಂತೋಷ್, ಕಾನ್‌ಸ್ಟೆಬಲ್ ಗೋರಕ್‌ನಾಥ್ ಅವರನ್ನು ಅಮಾನತು ಗೊಳಿಸಿ ವೈಟ್‌ ಫೀಲ್ಡ್ ವಿಭಾಗದ ಡಿಸಿಪಿ ಕೆ.ಪರಶುರಾಮ ಆದೇಶಿಸಿದ್ದಾರೆ.

Related Articles

Back to top button
error: Content is protected !!