ಇತರೆ

ಪಲ್ಲಂಗದಾಟಕ್ಕೆ ಅಡ್ಡಿ ಎಂದು ಮಗಳನ್ನೇ ಕೊಂದ ತಂದೆ

Views: 243

ಕನ್ನಡ ಕರಾವಳಿ ಸುದ್ದಿ: ಪಲ್ಲಂಗದಾಟಕ್ಕೆ ಅಡ್ಡಿಯಾಗುತ್ತಿದ್ದಾಳೆಂದು ಮಗಳನ್ನೇ ಕೊಲೆ ಮಾಡಿದ ಮಲತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.

ದರ್ಶನ್ ಕೊಲೆ ಮಾಡಿದ ಆರೋಪಿ. ಕುಂಬಳಗೋಡಿನ ರಾಮಸಂದ್ರದಲ್ಲಿ ಈ ಘಟನೆ ನಡೆದಿತ್ತು. ಸದ್ಯ ಆರೋಪಿಯ ಜಾಡು ಹಿಡಿದು ಬಂಧಿಸಿರುವ ಪೊಲೀಸರಿಗೆ ಕೊಲೆಯ ಸ್ಪೋಟಕ ವಿಚಾರಗಳು ಗೊತ್ತಾಗಿದೆ. ಇನ್ ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದ ಬಾಲಕಿ ಸಿರಿಯ ತಾಯಿ ಶಿಲ್ಪಾಳನ್ನು ದರ್ಶನ್ ಎರಡನೇ ಮದುವೆಯಾಗಿದ್ದ. ಬಳಿಕ ದರ್ಶನ್ ತನ್ನ ಖಾಸಗಿತನದ ಬಗ್ಗೆ ತಲೆಕೆಡಿಸಿಕೊಂಡಿದ್ದ. ಹೀಗಾಗಿ ಆರೋಪಿಯು ಬಾಲಕಿಯ ಅಜ್ಜಿ ಇರುವ ತನಕ ಯಾವುದೇ ಕಿರಿಕ್ ಮಾಡುತ್ತಿರಲಿಲ್ಲ. ಆದರೆ ಆಕೆಯ ಅಜ್ಜಿ ಇತ್ತೀಚೆಗೆ ಮೃತಪಟ್ಟಿದ್ದರು. ಬಳಿಕ ತನ್ನ ಬುದ್ದಿ ತೋರಿಸಲು ಶುರು ಮಾಡಿದ ದರ್ಶನ್, ಬಾಲಕಿಗೆ ಹೊಡೆದು ಬಡಿದು ಚಿತ್ರಹಿಂಸೆ ಕೊಡುತ್ತಿದ್ದ. ನಾಲ್ಕು ದಿನಗಳ ಹಿಂದೆ ಮನೆಗೆ ಬಂದಾಗ ಆರೋಪಿ ಬಾಲಕಿಯನ್ನು ಕೊಲೆ ಮಾಡಿದ್ದ. ಬಾಲಕಿಯನ್ನು ಕೊಲೆ ಮಾಡಿದ್ದಲ್ಲದೆ ಸಾಕ್ಷ್ಯ ನಾಶಕ್ಕೂ ಯತ್ನಿಸಿದ್ದ. ಆದರೆ ಅದೇ ವೇಳೆ ಶಿಲ್ಪಾ ಮನೆಗೆ ಬಂದಿದ್ದರಿಂದ ಗಾಬರಿಯಾದ ದರ್ಶನ್, ಆಕೆಯನ್ನು ರೂಮಿನಲ್ಲಿ ಕೂಡಿ ಹಾಕಿ ಪರಾರಿಯಾಗಿದ್ದ. ಪೊಲೀಸರು ಆತನ ಬೆನ್ನು ಬಿದ್ದು, ನೆಲಮಂಗಲ ಬಳಿ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ.

Related Articles

Back to top button
error: Content is protected !!