ಇತರೆ

ಕುಂದಾಪುರ: ಲಾರಿಯಲ್ಲಿ ಕಾನೂನು ಬಾಹಿರವಾಗಿ ಉಚಿತ ಅನ್ನಭಾಗ್ಯ ಅಕ್ಕಿ ‌ಸಾಗಾಟ ,ಚಾಲಕ ವಶಕ್ಕೆ

Views: 182

ಕನ್ನಡ ಕರಾವಳಿ ಸುದ್ದಿ: ಉಡುಪಿ ಜಿಲ್ಲೆಯ ಬೈಂದೂರು-ಕುಂದಾಪುರ ರಾ.ಹೆ 66 ರ ಮಾರ್ಗವಾಗಿ ಲಾರಿಯಲ್ಲಿ ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಕಾನೂನು ಬಾಹಿರವಾಗಿ ರವಾನಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ ಪೊಲೀಸರು ದಾಳಿ ನಡೆಸಿ, ಚಾಲಕನನ್ನು ವಶಪಡಿಸಿಕೊಂಡಿದ್ದಾರೆ.

ಕುಂದಾಪುರ ಆಹಾರ ನಿರೀಕ್ಷಕರಾದ ಸುರೇಶ್ ಹೆಚ್‌.ಎಸ್‌ ಅವರು 24-10-2025 ರಂದು ಕುಂದಾಪುರ ತಾಲೂಕು, ತ್ರಾಸಿ ಗ್ರಾಮದ ಮರವಂತೆ ಬೀಚ್‌ ಹತ್ತಿರದ ಕ್ರಾಸ್‌ ರಸ್ತೆಯಲ್ಲಿ ಬೈಂದೂರು-ಕುಂದಾಪುರ ರಾ.ಹೆ 66 ರ ಮಾರ್ಗವಾಗಿ ಲಾರಿಯಲ್ಲಿ ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಕಾನೂನು ಬಾಹಿರವಾಗಿ ರವಾನಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ, ಪಿರ್ಯಾದಿದಾರರು ಗಂಗೊಳ್ಳಿ ಪೊಲೀಸ್‌ ಠಾಣಾ ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ ಹೋಗಿದ್ದಾಗ ಲಾರಿ ಬರುತ್ತಿರುವುದನ್ನು ಕಂಡು, ನಿಲ್ಲಿಸಿದಾಗ, ಲಾರಿ ಚಾಲಕನು ವಾಹನ ನಿಲ್ಲಿಸಿ ಓಡಿ ಹೋಗಲು ಪ್ರಯತ್ನಿಸಿದವನನ್ನು ಠಾಣಾ ಸಿಬ್ಬಂದಿಗಳ ಸಹಾಯದಿಂದ ಸುತ್ತುವರಿದು ವಶಕ್ಕೆ ಪಡೆದು ವಿಚಾರಿಸಲಾಗಿ ಭಟ್ಕಳದ ಶಫೀಕ್‌ ಸಾಹೇಬ್‌ ಎನ್ನುವವರು ತನ್ನ ಲಾರಿಯಲ್ಲಿ 214 ಚೀಲ ಗಳಲ್ಲಿ, ಒಟ್ಟು 107 ಕ್ವಿಂಟಾಲ್‌ ಅಕ್ಕಿಯನ್ನು ಕಾನೂನು ಬಾಹೀರವಾಗಿ ಅಕ್ರಮವಾಗಿ ಸಾಗಾಟಮಾಡುತ್ತಿರುವುದಾಗಿದೆ.ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ ನಂಜುಂಡ ಕೆ. ಆರ್‌ ಹಾಗೂ ಭಟ್ಕಳದ ಶಫೀಕ್‌ ಸಾಹೇಬ್‌ ರವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು  ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Related Articles

Back to top button