ಕ್ರೀಡೆ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಳಾವರ: ಕೋಟೇಶ್ವರ ವೃತ್ತ ಮಟ್ಟದ ಕ್ರೀಡಾಕೂಟ-2025 ಉದ್ಘಾಟನೆ

Views: 249

ಕನ್ನಡ ಕರಾವಳಿ ಸುದ್ದಿ: ಶಿಕ್ಷಣಾಧಿಕಾರಿಗಳ ಕಛೇರಿ, ಕುಂದಾಪುರ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಳಾವರ ಇವರ ಆಶ್ರಯದಲ್ಲಿ ಕೋಟೇಶ್ವರ ವೃತ್ತ ಮಟ್ಟದ 14ರ ವಯೋಮಾನದ (ಪ್ರಾಥಮಿಕ ಹಾಗೂ ಪ್ರೌಢಶಾಲಾ) ಬಾಲಕ-ಬಾಲಕಿಯರ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮ ಅಕ್ಟೋಬರ್ 24ರಂದು ಕಾಳಾವರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಮಾಜಿ ಸಚಿವರು ಹಾಗೂ ಸಂಸದರು ಕೆ. ಜಯಪ್ರಕಾಶ್ ಹೆಗ್ಡೆ ಕ್ರೀಡಾಕೂಟವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಅವರು, ಕ್ರೀಡೆಯಲ್ಲಿ ನಾವೆಲ್ಲರೂ ಒಂದೇ ಎನ್ನುವ ಮನೋಭಾವ ಬೆಳೆಸಿಕೊಂಡು ನಂತರ ಕಾಲಘಟ್ಟದಲ್ಲಿ ಯಾವುದೇ ಬದಲಾವಣೆಯಾಗಬಾರದು. ಶಿಕ್ಷಣದ ಜೊತೆಯಲ್ಲಿ ವಿದ್ಯಾರ್ಥಿಗಳ ಮಾನಸಿಕ, ದೈಹಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿಯಾಗಿದೆ, ಕ್ರೀಡೆಯಲ್ಲಿ ಸೋಲು ಗೆಲುವು ಸಹಜ ಸೋತರೆ ಎದೆಗುಂದಬಾರದು. ಕ್ರೀಡೆಯಲ್ಲಿ ಸ್ಪರ್ಧಿಸುವುದು ಬಹಳ ಮುಖ್ಯ. ಶಿಕ್ಷಕರು ಪ್ರೋತ್ಸಾಹಿಸಿದ ಕ್ರೀಡೆಯಲ್ಲಿ ವಿದ್ಯಾರ್ಥಿಗಳು ಸದ್ ವಿನಿಯೋಗ ಮಾಡಿಕೊಂಡು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕ್ರೀಡಾಳುಗಳಿಗೆ ಉತ್ತಮ ಅವಕಾಶಕ್ಕೆ ಸರಕಾರವೇ ಪ್ರೋತ್ಸಾಹಿಸುತ್ತದೆ ಎಂದರು.

ಕಾಳಾವರ ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ್ ಶೆಟ್ಟಿಗಾರ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸೋಲು ಗೆಲುವಿನ ಕುರಿತು ಚಿಂತಿಸದೆ ಶಿಕ್ಷಣದ ಜೊತೆಗೆ ಕ್ರೀಡೆಗೆ ಒತ್ತು ನೀಡಿದಾಗ ಆರೋಗ್ಯವಂತರಾಗಿ, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದರು. 

ವೇದಿಕೆಯಲ್ಲಿ  ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಭರತ್ ಕುಮಾರ್ ಶೆಟ್ಟಿ, ಕಾಳಾವರ ಕಾಳಿಂಗ ಸುಬ್ರಹ್ಮಣ್ಯ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಹೆಗ್ಡೆ, ಉದ್ಯಮಿಗಳು ಕಿಶೋರ್ ಕುಮಾರ್ ಶೆಟ್ಟಿ ಮೊಳಹಳ್ಳಿ , ಕಾಳಾವರ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಮುಜರತ್ ಜಹಾನ್ ಅಕ್ಬರ್ ಎಮ್, ಶಿಕ್ಷಣ ಸಂಯೋಜಕರಾದ ರಾಜು ಖಾರ್ವಿ, ಕುಂದಾಪುರ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸತ್ಯನಾರಾಯಣ ಜಿ, ಕಾಳಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಂಜಿತ್ ಕುಮಾರ್ ಶೆಟ್ಟಿ, ಕಾಳಾವರ ಗ್ರಾಮ ಪಂಚಾಯತ್ ಸದಸ್ಯರಾದ ರಾಮಚಂದ್ರ ನಾವಡ, ರಮೇಶ್ ಶೆಟ್ಟಿ ವಕ್ವಾಡಿ, ಜಯಪ್ರಕಾಶ್ ಶೆಟ್ಟಿ, ಎಸ್.ಡಿಎಂಸಿ ಸದಸ್ಯೆ ಶ್ರೀಮತಿ ದೀಪಾ ಶೆಟ್ಟಿ, ಕ.ರಾ.ಪ್ರಾ.ಶಾ.ಶಿ. ಸಂಘ, ದೈಹಿಕ ಶಿಕ್ಷಕರು ಅಧ್ಯಕ್ಷರು ತಾ.ದೈ.ಶಿ.ಸಂಘ. ಕುಂದಾಪುರ ಗಣೇಶ್ ಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾ ಅಧ್ಯಕ್ಷರು ಗ್ರೇಡ್-1ದೈ.ಶಿ.ಶಿ.ಸಂಘ ಕುಸುಮಾಕರ್ ಶೆಟ್ಟಿ, ಜಿಲ್ಲಾಧ್ಯಕ್ಷರು ಗ್ರೇಡ್ -2 ದೈ.ಶಿ.ಶಿ.ಸಂಘ ಕಿಶನ್ ರಾಜ್ ಶೆಟ್ಟಿ, ಅಧ್ಯಕ್ಷರು ಕುಂದಾಪುರ ತಾಲೂಕು ದೈ.ಶಿ.ಶಿ.ಸಂಘ ಉದಯ ಮಡಿವಾಳ, ಉಪಾಧ್ಯಕ್ಷರು ಗ್ರೇಡ್-2 ದೈ.ಶಿ.ಶಿ. ಸಂಘ ಉಡುಪಿ ಶರತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಮಾಜಿ ಸಚಿವರು ಹಾಗೂ ಸಂಸದರಾದ ಜಯಪ್ರಕಾಶ್ ಹೆಗ್ಡೆ ಅವರು ಬೆಲೂನ್ ಮತ್ತು ಪಾರಿವಾಳ ಹಾರಿಸುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಚಂದ್ರಶೇಖರ್ ಹೆಗ್ಡೆ ಕ್ರೀಡಾ ಧ್ವಜಾರೋಹಣಗೈದರು. ಪಥಸಂಚಲನೆಯಲ್ಲಿ ಕ್ರೀಡಾ ವಂದನೆಯನ್ನು ಭರತ್ ಕುಮಾರ್ ಶೆಟ್ಟಿ ಸ್ವೀಕರಿಸಿದರು. ಕ್ರೀಡಾ ಜ್ಯೋತಿಯನ್ನು ರಂಜಿತ್ ಕುಮಾರ್ ಶೆಟ್ಟಿ ಬೆಳಗಿಸಿದರು.

ಈ ಸಂದರ್ಭದಲ್ಲಿ ತೆಕ್ಕಟ್ಟೆ ಕುವೆಂಪು ಮಾದರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಬ್ಯಾಂಡ್ ಸೆಟ್ ಮುಖಾಂತರ ಅದ್ದೂರಿ ಪಥಸಂಚಲನೆ ನಡೆಯಿತು.

ಸರ್ಕಾರಿ ಪ್ರೌಢಶಾಲೆ ಕಾಳಾವರ ದೈಹಿಕ ಶಿಕ್ಷಕ ರಾಮ ಅವರಿಗೆ ಸನ್ಮಾನ ನೀಡಲಾಯಿತು.

ಶಿಕ್ಷಣ ಸಂಯೋಜಿಕ ರಾಜು ಖಾರ್ವಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಾಲಾ ಮುಖ್ಯೋಪಾಧ್ಯಾಯರಾದ ವೆಂಕಟ್ ಅವರು ಸ್ವಾಗತಿಸಿದರು. ಶಿಕ್ಷಕ ಉದಯ್ ಕುಮಾರ್ ನಿರೂಪಿಸಿದರು. ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಶೆಟ್ಟಿ ವಂದಿಸಿದರು.

 

 

 

Related Articles

Back to top button