ಬಸ್ರೂರು ಶ್ರೀ ಶಾರದಾ ಕಾಲೇಜು :ವೈದೇಹಿಯವರ ಸಾಹಿತ್ಯ; ಮರು ಚಿಂತನೆ – ಕೃತಿ ಲೋಕಾರ್ಪಣೆ
Views: 7
ಕನ್ನಡ ಕರಾವಳಿ ಸುದ್ದಿ: ಬಸ್ರೂರು ಶ್ರೀ ಶಾರದಾ ಕಾಲೇಜು ಕನ್ನಡ ವಿಭಾಗ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕುಂದಾಪುರ, ಸುವಿ ಪಬ್ಲಿಕೇಶನ್ ಶಿಕಾರಿಪುರ ಇವರ ಸಂಯುಕ್ತ ಆಶ್ರಯದಲ್ಲಿ ವೈದೇಹಿಯವರ ಸಾಹಿತ್ಯ ಮರು ಚಿಂತನೆ ಎನ್ನುವ ವಿಷಯದ ಮೇಲೆ ಒಂದು ದಿನದ ರಾಷ್ಟ್ರಮಟ್ಟದ ವೆಬಿನಾರ್ ಮತ್ತು ಕೃತಿ ಬಿಡುಗಡೆ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು
ಕಾರ್ಯಕ್ರಮವನ್ನು ಶ್ರೀ ಶಾರದಾ ಕಾಲೇಜು ಟ್ರಸ್ಟ್ ಬಸ್ರೂರು ಇದರ ಟ್ರಸ್ಟಿಗಳಾದ ಶ್ರೀಮತಿ ಅನುಪಮಾ ಎಸ್ ಶೆಟ್ಟಿ ಇವರು ಉದ್ಘಾಟಿಸಿ ವೈದೇಹಿಯವರು ತಮ್ಮ ಕಾದಂಬರಿ ಕಥೆ ಮತ್ತು ಲೇಖನಗಳಲ್ಲಿ ಮಹಿಳೆಯರ ಸಾಮಾಜಿಕ, ಕೌಟುಂಬಿಕ ಸಮಸ್ಯೆಗಳ ಬಗ್ಗೆ ಮತ್ತು ಸಮಾಜವು ಮಹಿಳೆಯರನ್ನು ನಡೆಸಿಕೊಳ್ಳುತ್ತಿರುವ ರೀತಿಗಳ ಬಗ್ಗೆ ತಮ್ಮ ಪ್ರಾದೇಶಿಕ ಭಾಷೆಯಾದ ಕುಂದಾಪುರ ಕನ್ನಡದಲ್ಲಿ ವಿವರಿಸುವ ಕೆಲಸ ಮಾಡಿದ್ದಾರೆ .ಅವರ ಸಾಹಿತ್ಯದ ಮರು ಚಿಂತನೆ ಎಲ್ಲಾ ಕಾಲಗಳಿಗೂ ಪ್ರಸ್ತುತ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಸೌಮ್ಯ ಹೇರಿಕುದ್ರು ಸಹಾಯಕ ಪ್ರಾಧ್ಯಾಪಕರು ಕನ್ನಡ ವಿಭಾಗ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಇವರು ಮಾತನಾಡಿ, ವೈದೇಹಿಯವರ ಅನೇಕ ಕಾದಂಬರಿಗಳ ಬಗ್ಗೆ ಕಥೆಗಳ ಬಗ್ಗೆ ವಿಶ್ಲೇಷಿಸಿ ವಿದ್ಯಾರ್ಥಿಗಳು ಅವರ ಕಾದಂಬರಿಗಳನ್ನು ಲೇಖನಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದು ಹೇಳಿದರು.
ಪ್ರೊಫೆಸರ್ ಹಯವದನ ಉಪಾಧ್ಯ ನಿವೃತ್ತ ಪ್ರಾಧ್ಯಾಪಕರು ಇವರು ವೈದೇಹಿಯವರ ಸಾಹಿತ್ಯ ಮರುಚಿಂತನೆ ಎನ್ನುವ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶ್ರೀ ಸುನಿಲ್ ಕುಮಾರ್ ಬಿ ಎನ್ ಪ್ರಕಾಶಕರು ಸುವಿ ಪಬ್ಲಿಕೇಶನ್ ಶಿಕಾರಿಪುರ ಹಾಗೂ ಕಾಲೇಜಿನ ಆಡಳಿತ ಅಧಿಕಾರಿಯಾದ ಡಾ. ಮೋಹನ್ ಕೆ ಎನ್ ಉಪಸ್ಥಿತರಿದ್ದರು . ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರಾವತಿ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಕಾರ್ಯಕ್ರಮದ ಸಂಯೋಜಕ ಹಾಗೂ ಕನ್ನಡ ವಿಭಾಗ ಮುಖ್ಯಸ್ಥ ಶ್ರೀಕುಮಾರ್ ಪಿ ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತಾವಿಸಿದರು. ಕಾರ್ಯಕ್ರಮವನ್ನು ಉಪನ್ಯಾಸಕ ಅಕ್ಷಯ್ ಹೆಗ್ಡೆ ಮೊಳಹಳ್ಳಿ ನಿರೂಪಿಸಿ, ಶ್ರೀಮತಿ ಪ್ರಮೀಳಾ ವಂದಿಸಿದರು.ಕಾರ್ಯಕ್ರಮದ ನಂತರ ಎರಡು ಪ್ರತ್ಯೇಕ ಗೋಷ್ಠಿಗಳಲ್ಲಿ ಪ್ರಬಂಧ ಮಂಡನೆ ನಡೆಯಿತು.








