ಸಾಮಾಜಿಕ

ಅ.12ರಂದು ದ.ಕ.ಪದ್ಮಶಾಲಿ ಸಮಾಜ ಸೇವಾ ಕೂಟ ಬೆಂಗಳೂರು, 35ನೇ ವಾರ್ಷಿಕ ಮಹಾಸಭೆ

Views: 380

ಕನ್ನಡ ಕರಾವಳಿ ಸುದ್ದಿ: ದ.ಕ.ಪದ್ಮಶಾಲಿ ಸಮಾಜ ಸೇವಾ ಕೂಟ(ರಿ.), ಬೆಂಗಳೂರು ಇದರ 35ನೇ ವಾರ್ಷಿಕ ಮಹಾಸಭೆಯು ದಿನಾಂಕ 12-10-2025 ಭಾನುವಾರ ಬೆಳಗ್ಗೆ 9 ಘಂಟೆಗೆ ಕೆ.ಇ.ಬಿ. ಎಂಜಿನಿಯರಿಂಗ್ ಅಸೋಸಿಯೇಶನ್, ರೇಸ್ ಕೋರ್ಸ್ ರಸ್ತೆ, ಆನಂದ ರಾವ್ ಸರ್ಕಲ್ ಬೆಂಗಳೂರು ಇಲ್ಲಿ ನೆರವೇರಲಿದೆ.

ಕೂಟದ ಅಧ್ಯಕ್ಷರಾದ ಶ್ರೀಮತಿ ಭಾನುಮತಿ ಡಿ. ಶೆಟ್ಟಿಗಾರ್ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಡಾ| ಅರುಣ್ ಎಮ್‌.ಬಿ.ಬಿ.ಎಸ್,ಡಿ.ವಿ.ಡಿ, ಡಿ.ಎನ್‌.ಬಿ Consultant Dermatologst, ಮಣಿಪಾಲ ಆಸ್ಪತ್ರೆ, ಬೆಂಗಳೂರು, ಶ್ರೀ ರವಿ ಶೆಟ್ಟಿಗಾ‌ರ್ ಕಾರ್ಕಳ ಅಧ್ಯಕ್ಷರು ದ ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ ಮಂಗಳೂರು, ಶ್ರೀ ಉತ್ತಮ್ ಶೆಟ್ಟಿಗಾ‌ರ್ ಅಧ್ಯಕ್ಷರು ಪದ್ಮಶಾಲಿ ಸಮಾಜ ಸೇವಾ ಸಂಘ ಮುಂಬಯಿ, ಶ್ರೀ ರಘುರಾಮ್ ಶೆಟ್ಟಿಗಾರ್,ಅಧ್ಯಕ್ಷರು ಪದ್ಮಶಾಲಿ ಸಮುದಾಯ, ದುಬೈ, ಯು.ಎ.ಇ, ಗೌರವಾರ್ಪಣೆ ಶ್ರೀ ಚೇತನ್ ಡಿ,ಮುಖ್ಯ ಪ್ರಧಾನ ವ್ಯವಸ್ಥಾಪಕರು (ತಾಂ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ), ರೂಪಶ್ರೀ ವರ್ಕಾಡಿ ಖ್ಯಾತ ಅಭಿನೇತ್ರಿ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತೆ

ವಿಶೇಷ ಸೂಚನೆ:

ಮಾನ್ಯ ಸದಸ್ಯರು ಸರ್ವ ಸದಸ್ಯರ ಮಹಾಸಭೆಯಲ್ಲಿ ಚರ್ಚಿಸಲು ವಿಷಯಗಳೇನಾದರೂ ಇದ್ದಲ್ಲಿ 7 ದಿನಗಳ ಮುಂಚಿತವಾಗಿ email/whatsapp ಮೂಲಕ ಅಧ್ಯಕ್ಷರು ಅಥವಾ ಗೌ. ಕಾರ್ಯದರ್ಶಿಯವರಿಗೆ ತಿಳಿಸತಕ್ಕದ್ದು

ಕೂಟದ ವಾರ್ಷಿಕ ಸಭೆಗೆ ದೇಣಿಗೆ ನೀಡಬಯಸುವವರು ಈ ಕೆಳಕಂಡ ಬಾತೆಗೆ ಹಣವನ್ನು ಸಂದಾಯ ಮಾಡಬೇಕಾಗಿ ವಿನಂತಿ.

ಯು.ಪಿ.ಐ (UPI ಮುಖಾಂತರ ಸಂದಾಯ ಮಾಡುವವರು 9195354 43311 ಗೆ ಸ್ಟೀನ್-ಶಾಟ್ (screenshot) ಕಳುಹಿಸಬೇಕಾಗಿ ವಿನಂತಿ.

Related Articles

Back to top button