ಇತರೆ
ಧರ್ಮಸ್ಥಳ ಪ್ರಕರಣ: ಮಾಸ್ಕ್ ಮ್ಯಾನ್ ಬುರುಡೆ ಚಿನ್ನಯ್ಯಗೆ ಬಿಗ್ ಶಾಕ್..!

Views: 101
ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಕ್ ಮ್ಯಾನ್ ಬುರುಡೆ ಚಿನ್ನಯ್ಯಗೆ ಕೋರ್ಟ್ ಶಾಕ್ ನೀಡಿದೆ. ಸದ್ಯಕ್ಕೆ ಚಿನ್ನಯ್ಯಗೆ ಜೈಲುವಾಸವೇ ಗತಿಯಾಗಿದೆ.
ಧರ್ಮಸ್ಥಳದ ಬಳಿ ನೂರಾರು ಶವಗಳನ್ನು ತಾನು ಹೂತು ಹಾಕಿರುವುದಾಗಿ ಆರೋಪಿಸಿದ್ದ ಚಿನ್ನಯ್ಯ 17 ಜಾಗಗಳನ್ನು ತೋರಿಸಿದ್ದ. ಆದರೆ, ವಿಶೇಷ ತನಿಖಾ ತಂಡ (ಎಸ್‌ಐಟಿ) ಈ ಜಾಗಗಳಲ್ಲಿ ನಡೆಸಿದ ಉತ್ಖನನದ ವೇಳೆ ಕೆಲವೊಂದು ಸ್ಥಳಗಳನ್ನು ಬಿಟ್ಟು ಉಳಿದೆಡೆ ಯಾವುದೇ ಮಾನವ ಕಳೇಬರಗಳು ಪತ್ತೆಯಾಗಿರಲಿಲ್ಲ.
ಶಿವಮೊಗ್ಗ ಜೈಲು ಸೇರಿರುವ ಬುರುಡೆ ಚಿನ್ನಯ್ಯ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಜೆ ಎಂ ಎಫ್ ಸಿ ಕೋರ್ಟ್, ಚಿನ್ನಯ್ಯಗೆ ಜಾಮೀನು ನೀಡಲು ನಿರಾಕರಿಸಿದೆ.
ಶಿವಮೊಗ್ಗ ಜೈಲಿನಲ್ಲಿರುವ ಚಿನ್ನಯ್ಯ ಜಾಮೀನಿಗಾಗಿ ಕೋರ್ಟ್ ಮೊರೆ ಹೋಗಿದ್ದ. ಈ ವೇಳೆ ನ್ಯಾಯಾಲಯ, ಪ್ರಕರಣದ ಬಗ್ಗೆ ಎಸ್ ಐಟಿ ತನಿಖೆ ನಡೆಸುತ್ತಿರುವುದರಿಂದ ಜಾಮೀನು ನೀಡಲು ನಿರಾಕರಿಸಿದ್ದು, ಚಿನ್ನಯ್ಯ ಜಾಮೀನು ಅರ್ಜಿ ವಜಾಗೊಳಿಸಿದೆ.