ಇತರೆ

ಕಮಲಶಿಲೆ ದೇವಸ್ಥಾನದಿಂದ ವಾಪಾಸು ಬರುವ ವೇಳೆ ಕಡವೆ ಅಡ್ಡ ಬಂದು ಬೈಕ್ ಸವಾರ ಸಾವು, ಸಹ ಸವಾರ ಗಂಭೀರ ಗಾಯ 

Views: 552

ಕನ್ನಡ ಕರಾವಳಿ ಸುದ್ದಿ: ಕಮಲಶಿಲೆ ದೇವಸ್ಥಾನದಿಂದ ಬೈಕ್ ನಲ್ಲಿ ವಾಪಾಸು ಬರುವಾಗ  ಕಡವೆ ಅಡ್ಡ ಬಂದು ಬೈಕ್ ಸವಾರ ಸಾವನ್ನಪ್ಪಿ, ಸಹ ಸವಾರ ಗಂಭೀರ ಗಾಯಗೊಂಡ ಘಟನೆ ಸೆಪ್ಟೆಂಬರ್ 13ರಂದು ಅಪರಾಹ್ನ ಸಂಭವಿಸಿದೆ.

ಬೈಕ್ ಸವಾರ ಕಾವ್ರಾಡಿಯ  ಶ್ರೇಯಸ್ ಮೊಗವೀರ (23) ಮೃತಪಟ್ಟ ಯುವಕ, ಸಹಸವಾರ ವಿಘ್ನೇಶ್ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ.

ಕಾವ್ರಾಡಿಯ ಸ್ನೇಹಿತರಿಬ್ಬರು ಇಂದು ಮಧ್ಯಾಹ್ನ ಕಮಲಶಿಲೆ ದೇವಸ್ಥಾನಕ್ಕೆ ಹೋಗಿ ವಾಪಸು  ಬರುತ್ತಿದ್ದ ಸಂದರ್ಭ ತಾರೆಕುಡ್ಲು ಸಮೀಪ ಕಡವೆ ಯೊಂದು ಏಕಾಏಕಿ ಬೈಕ್ ಗೆ ಅಡ್ಡ ಬಂದ ಪರಿಣಾಮ ಕಡವೆಗೆ ಡಿಕ್ಕಿ ಹೊಡೆದು ಬೈಕ್ ಪಲ್ಟಿಯಾಗಿ ಈ ದುರಂತ ಸಂಭವಿಸಿದೆ.

ಶಂಕರನಾರಾಯಣ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

Related Articles

Back to top button