ಶಿಕ್ಷಣ

ಶಾಲಾ ಮಕ್ಕಳಿಗೆ ದಸರಾ ರಜೆ ಘೋಷಣೆ: ರಜೆ ಆರಂಭ ಯಾವಾಗ? ಎಷ್ಟು ದಿನ?

Views: 451

ಕನ್ನಡ ಕರಾವಳಿ ಸುದ್ದಿ: ರಾಜ್ಯ ಸರಕಾರದ ಶಾಲಾ ಶಿಕ್ಷಣ ಇಲಾಖೆಯ ವ್ಯಾಪ್ತಿಯ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ (ರಾಜ್ಯ ಪಠ್ಯಕ್ರಮ) ಶಾಲೆಗಳಿಗೆ ಸೆ.20 ರಿಂದ ದಸರಾ ರಜೆ ಪ್ರಾರಂಭಗೊಳ್ಳಲಿದೆ. ಹಾಗೂ ಈ ರಜೆ ಅಕ್ಟೋಬರ್‌ 6ರ ವರೆಗೂ ಇರಲಿದೆ.

ರಾಜ್ಯ ಹಾಗೂ ಕೇಂದ್ರ ಪಠ್ಯಕ್ರಮದ ಶಾಲೆಗಳಿಗೆ ಸೆ.20 ರಿಂದ ಮಧ್ಯಾವಧಿ (ದಸರಾ ರಜೆ) ಪ್ರಾರಂಭಗೊಳ್ಳಲಿದೆ. ಅ.7 ರಿಂದ ಶಾಲೆಗಳು ಪ್ರಾರಂಭಗೊಳ್ಳಲಿದೆ.

ಅವಿಭಜಿತ ದ.ಕ.ಜಿಲ್ಲೆಯ ಸಿಬಿಎಸ್‌ಯ ಶಾಲೆಗಳಲ್ಲಿ ಸೆ.20 ರಿಂದ ಮಧ್ಯಾವಧಿ ರಜೆ ಆರಂಭಗೊಂಡು ಅ.2 ರವರೆಗೆ ಇರಲಿದ್ದು, ಅ.3 ರಿಂದ ತರಗತಿಗಳು ಪುನಃ ಆರಂಭಗೊಳ್ಳಲಿದೆ.

ಸಿಬಿಎಸ್‌ಇ ಕೆಲವು ಆಡಳಿತ ಮಂಡಳಿಗಳ ರಜಾ ಅವಧಿಯಲ್ಲಿ ವ್ಯತ್ಯಾಸ ಇರಬಹುದು ಎಂದು ವರದಿಯಾಗಿದೆ.

ದೀಪಾವಳಿ ಹಾಗೂ ಕ್ರಿಸ್ಮಸ್‌ ಸಂದರ್ಭದಲ್ಲಿ ರಜಾ ಕೊಡುವಾಗ ಕಡಿಮೆ ಮಾಡುವ ಸಾಧ್ಯತೆ ಕೂಡಾ ಇದೆ. ವಿದ್ಯಾರ್ಥಿಗಳಿಗೆ ಅಥವಾ ವಿದ್ಯಾರ್ಥಿಗಳ ಪಾಲಕ, ಪೋಷಕರಿಗೆ ಯಾವುದೇ ಒತ್ತಡ ಆಗದ ರೀತಿಯಲ್ಲಿ ರಜಾ ಅವಧಿಯ ವಿಶೇಷ ತರಗತಿಗೆ ಯೋಜನೆ ಮಾಡಿಕೊಳ್ಳಲಾಗುತ್ತಿದೆ ಎಂದು ವರದಿಯಾಗಿದೆ.

Related Articles

Back to top button