ಶಿಕ್ಷಣ

ತಾಲೂಕು ಮಟ್ಟದ ನೆಟ್ ಬಾಲ್ ಪಂದ್ಯಾಟ: ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಶಾಲೆಯ 22 ವಿದ್ಯಾರ್ಥಿಗಳು

Views: 24

ಕನ್ನಡ ಕರಾವಳಿ ಸುದ್ದಿ: ಸೆಪ್ಟೆಂಬರ್ 09ರಂದು ಮೂಕಾಂಬಿಕಾ ದೇವಳದ ಪ್ರೌಢಶಾಲೆ ಕೊಲ್ಲೂರು ಇಲ್ಲಿ ನಡೆದ ಜಿಲ್ಲಾಮಟ್ಟದ 14ರ ವಯೋಮಾನದ ನೆಟ್ ಬಾಲ್ ಪಂದ್ಯಾಟದಲ್ಲಿ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿನಿಯರ ತಂಡವು ಪ್ರಥಮ ಸ್ಥಾನ ಗಳಿಸುವುದರೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

14ರ ವಯೋಮಾನದ ಬಾಲಕರ ಮತ್ತು 17ರ ವಯೋಮಾನದ ಬಾಲಕ ಮತ್ತು ಬಾಲಕಿಯರ ತಂಡ ದ್ವಿತೀಯ ಸ್ಥಾನವನ್ನು ಗಳಿಸಿಕೊಂಡು ಒಟ್ಟು ಇಪ್ಪತ್ತೆರಡು ವಿದ್ಯಾರ್ಥಿಗಳು( ಅಜಯ್ ಶ್ರೀ 7ನೇ ತರಗತಿ , ಅಪೇಕ್ಷ 5ನೇ ತರಗತಿ, ಪ್ರಜ್ಞ 8ನೇ ತರಗತಿ , ಆರಾಧ್ಯ 8ನೇ ತರಗತಿ , ಚಾರ್ವಿ 7ನೇ ತರಗತಿ ,ವೈಭವಿ 7ನೇ ತರಗತಿ ,ಶರಣ್ಯ 7ನೇ ತರಗತಿ , ಆರ್ಯನ್ ಖಾರ್ವಿ 8ನೇ ತರಗತಿ, ರಜತ್ 8ನೇ ತರಗತಿ, ಅಭಿಲಾಷ್ 8ನೇ ತರಗತಿ, ಶ್ರೇಯಸ್ ಖಾರ್ವಿ 8ನೇ ತರಗತಿ, ಗಗನ್ ಖಾರ್ವಿ 8ನೇ ತರಗತಿ,ರಿತೇಶ್ 10ನೇ ತರಗತಿ, ಪ್ರವೀಶ್ 9ನೇ ತರಗತಿ, ಸಮರ್ಥ್ 10ನೇ ತರಗತಿ, ರತಿಕ್ 10ನೇ ತರಗತಿ, ವಿಶಾಂತ್ ದೇವಾಡಿಗ 10ನೇ ತರಗತಿ, ಸಮೃದ್ಧಿ ಸಿ ಖಾರ್ವಿ 10ನೇ ತರಗತಿ, ಐಶ್ವರ್ಯ ಆರ್ ದೇವಾಡಿಗ 10ನೇ ತರಗತಿ, ಸಾನ್ವಿ ಎಸ್ ಪೂಜಾರಿ 9ನೇ ತರಗತಿ, ಶ್ರೀರಕ್ಷ 10ನೇ ತರಗತಿ) ನೇರವಾಗಿ ಜಿಲ್ಲಾಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ. 

ವಿದ್ಯಾರ್ಥಿಗಳ ಈ ಸಾಧನೆಯನ್ನು ಆಡಳಿತ ಮಂಡಳಿ,ಮುಖ್ಯ ಶಿಕ್ಷಕಿ ಬೋಧಕ ಬೋಧಕೇತರ ವರ್ಗದವರು ವಿದ್ಯಾರ್ಥಿಗಳು ಮೆಚ್ಚಿ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

Related Articles

Back to top button