ಶಿಕ್ಷಣ

ಸಿದ್ದಾಪುರ ಜ್ಞಾನಸರಸ್ವತಿ ಪಿಯು ಕಾಲೇಜಿನಲ್ಲಿ ರಂಗೋಲಿಯಲ್ಲಿ ಲೋಗೊ ಸ್ಪರ್ಧೆ

Views: 289

ಕನ್ನಡ ಕರಾವಳಿ ಸುದ್ದಿ: ಸಿದ್ಧಾಪುರ ಜ್ಞಾನಸರಸ್ವತಿ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಕಾಲೇಜಿನ ವಾಣಿಜ್ಯ ಸಂಘದ ವತಿಯಿಂದ ರಂಗೋಲಿಯಲ್ಲಿ ಲೋಗೊ ಸ್ಪರ್ಧೆ ಆಯೋಜಿಸಲಾಯಿತು.

ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸದ ಜೊತೆಗೆ ವೈಯಕ್ತಿಕ ಜೀವನದ ಕೌಶಲಗಳನ್ನು ಹೆಚ್ಚಿಸುವ ಸಲುವಾಗಿ ವಿವಿಧ ಬಣ್ಣಗಳಿಂದ ಕೂಡಿದ ಕಲಾತ್ಮಕ ರಂಗೋಲಿ ಗಳ ರಚನೆಗೆ ಪ್ರೋತ್ಸಾಹ ನೀಡಲಾಯಿತು.

ಕಾಲೇಜಿನ ಉಪ ಪ್ರಾಂಶುಪಾಲ ಹರ್ಷ ಶೆಟ್ಟಿ,ಉಪನ್ಯಾಸಕರಾದ ನಾಗರಾಜ್ ಗುಳ್ಳಾಡಿ, ನಯನ ಶೆಟ್ಟಿ, ದೀಕ್ಷಿತಾ ಸ್ಪರ್ಧೆಯ ತೀರ್ಪುಗಾರರಾಗಿದ್ದರು, ಕಾಲೇಜಿನ ಪ್ರಾಂಶುಪಾಲ ಅಮರೇಶ್ ಹೆಗ್ಡೆ ಉಪಸ್ಥಿತರಿದ್ದರು.ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀ ಜಗದೀಶ್ ಹಾಗೂ ಉಪನ್ಯಾಸಕರಾದ ನಾಗರತ್ನ ಜಿ ಈ ಸ್ಪರ್ಧೆಯನ್ನು ನಡೆಸಿಕೊಟ್ಟರು.

Related Articles

Back to top button