ಕುಂದಾಪುರದ ಆರ್.ಎನ್.ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ “ಸಂಸ್ಕ್ರತೋತ್ಸವ: ಶ್ರಾವಣಿ” ಕಾರ್ಯಕ್ರಮ

Views: 168
ಕನ್ನಡ ಕರಾವಳಿ ಸುದ್ದಿ: ವ್ಯಕ್ತಿಗಳು ಪುನಃ ಪುನಃ ಪರೀಕ್ಷೆಯಲ್ಲಿ ವಿಫಲರಾದಾಗ, ಜೀವನದಲ್ಲಿ ಸೋತಾಗ ಮಾನಸಿಕ ಸ್ಥೈರ್ಯ ತುಂಬುವಲ್ಲಿ ಭಗವದ್ಗೀತೆಯಲ್ಲಿ ಹೇಳಿದ ವಾಸ್ತವಿಕ ಮೌಲ್ಯಗಳು ಸಹಕಾರಿ. ಹಾಗೆಯೇ ಮಹಾಭಾರತ ಮತ್ತು ರಾಮಾಯಣದಲ್ಲಾದ ಉತ್ತಮ ವಿಚಾರಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ” ಎಂದು ಕುಂದಾಪುರದ ಆರ್.ಎನ್. ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಂಸ್ಕ್ರತ ಆಯೋಜಿಸಿದ ‘ ಸಂಸ್ಕ್ರತೋತ್ಸವ – ಶ್ರಾವಣೀ ‘ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಖ್ಯಾತ ವಾಗ್ಮಿ, ಶ್ರೀ ಎನ್ ಆರ್. ದಾಮೋದರ್ ಶರ್ಮಾರವರು ತಿಳಿಸಿದರು.ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ನವೀನ ಕುಮಾರ ಶೆಟ್ಟಿಯವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಕ್ರತ ವಿಭಾಗದ ಮುಖ್ಯಸ್ಥರಾದ ರವಿ ಉಪಾಧ್ಯರವರು ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಥಮ ಪಿ.ಯು.ಸಿ ಯ ವರೇಣ್ಯ ಶರ್ಮಾ ವೇದಘೋಷ ಮೊಳಗಿಸಿದರು. ಪ್ರಥಮ ಪಿ.ಯು.ಸಿ ವಿದ್ಯಾರ್ಥಿನಿ ಗಾರ್ಗಿದೇವಿ ಭರತನಾಟ್ಯ ಪ್ರದರ್ಶನ ನೀಡಿದರು. ಧನ್ವಿ ಶೆಟ್ಟಿ ಮತ್ತು ತಂಡ ಪ್ರಾರ್ಥನೆ ಹಾಡಿದರು. ದ್ವಿತೀಯ ಪಿ.ಯು.ಸಿ ತರಗತಿಯ ಪೂರ್ವಿತಾ ಧನ್ಯವಾದ ಸಲ್ಲಿಸಿದರು.
ದ್ವಿತೀಯ ಪಿ.ಯು.ಸಿ ಯ ಅಕ್ಷಯಾ ವಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.