ಧರ್ಮಸ್ಥಳ ಷಡ್ಯಂತ್ರದ ಹಿಂದಿರುವ ಸೂತ್ರಧಾರಿಗಳಿಗೆ ಬಂಧನದ ಭೀತಿ!

Views: 133
ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರೂಪಿಸಿದವರ ಹೆಸರುಗಳನ್ನು ಬಂಧಿತ ಮುಸುಕುಧಾರಿ ಚಿನ್ನಯ್ಯ ಪೊಲೀಸ್ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದು, ಧರ್ಮಸ್ಥಳದ ಷಡ್ಯಂತ್ರದ ಹಿಂದಿರುವ ಸೂತ್ರಧಾರಿಗಳ ವಿಚಾರಣೆಗೆ ಎಸ್‌ಐಟಿ ಸಿದ್ಧತೆ ನಡೆಸಿದ್ದು, ಷಡ್ಯಂತ್ರದಲ್ಲಿ ಭಾಗಿಯಾಗಿರುವ ಹಲವರಿಗೆ ಬಂಧನದ ಭೀತಿ ಎದುರಾಗಿದೆ.
ಧರ್ಮಸ್ಥಳ ಷಡ್ಯಂತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಈಗಾಗಲೇ ಮುಸುಕುಧಾರಿ ಚಿನ್ನಯ್ಯನನ್ನು ಬಂಧಿಸಿ ಯು ಟೂಬರ್ ಸಮೀರ್‌ನನ್ನು ವಿಚಾರಣೆಗೆ ಒಳಪಡಿಸಿದೆ.
ಈ ವಿಚಾರಣೆ ಸಂದರ್ಭದಲ್ಲಿ ಷಡ್ಯಂತ್ರದ ಸೂತ್ರಧಾರಿಗಳ ಬಗ್ಗೆ ಎಸ್‌ಐಟಿ ಪೊಲೀಸರಿಗೆ ಹಲವು ಮಾಹಿತಿಗಳು ಸಿಕ್ಕಿದ್ದು, ಈ ಮಾಹಿತಿ ಆಧಾರದ ಮೇಲೆ ಸೂತ್ರಧಾರಿಗಳ ವಿಚಾರಣೆಗೂ ಎಸ್‌ಐಟಿ ಮುಂದಾಗಿದ್ದು, ಹಲವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಮಾಡಲಿದೆ ಎಂದು ಹೇಳಲಾಗಿದೆ.
ಮುಸುಕುಧಾರಿ ಚಿನ್ನಯ್ಯನ ಬಂಧನದ ನಂತರ ಧರ್ಮಸ್ಥಳದ ಷಡ್ಯಂತ್ರದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ. ಯಾರು ಯಾರು ಯಾವ ರೀತಿ ಈ ಪ್ರಕರಣದಲ್ಲಿ ಪಾತ್ರ ವಹಿಸಿದ್ದಾರೆ ಎಂಬ ಬಗ್ಗೆ ಬಂಧಿತ ಮುಸುಕುಧಾರಿ ಪೊಲೀಸರ ಮುಂದೆ ಎಲ್ಲವನ್ನು ಬಹಿರಂಗಪಡಿಸಿದ್ದು, ತನ್ನ ಜತೆ ನಂಟು ಹೊಂದಿರುವ ಷಡ್ಯಂತ್ರ ಸೂತ್ರಧಾರಿಗಳ ದೊಡ್ಡ ಪಟ್ಟಿಯನ್ನೇ ಈ ಮುಸುಕುಧಾರಿ ಪೊಲೀಸರಿಗೆ ನೀಡಿದ್ದಾನೆ ಎನ್ನಲಾಗಿದೆ.
ಮುಸುಕುಧಾರಿಯ ತೀವ್ರ ವಿಚಾರಣೆ ನಂತರ ಆತನ ಹಿಂದೆ ಇರುವ ಸೂತ್ರಧಾರಿಗಳ ವಿಚಾರಣೆಗೆ ಒಳಪಡಿಸಿ ಅವಶ್ಯ ಎನಿಸಿದರೆ ಅವರನ್ನು ಬಂಧಿಸಲು ಎಸ್‌ಐಟಿ ಸಿದ್ಧತೆ ಮಾಡಿಕೊಂಡಿದ್ದು, ಸೂತ್ರಧಾರಿಗಳಿಗೆ ಬಂಧನದ ಭೀತಿ ಕಾಡುತ್ತಿದೆ. ಯಾವುದಕ್ಕೂ ಆತುರ ಪಡದೆ ಎಲ್ಲವನ್ನೂ ಕಾನೂನಿನ ಚೌಕಟ್ಟಿನಲ್ಲೇ ಸೂಕ್ಷ್ಮವಾಗಿ ನಿಭಾಯಿಸಿ ಒಬ್ಬೊಬ್ಬರೇ ಸೂತ್ರಧಾರಿಗಳನ್ನು ಎಡೆಮುರಿ ಕಟ್ಟಲು ಎಸ್‌ಐಟಿ ಮುಂದಾಗಿದೆ.