ಶಿಕ್ಷಣ

ವಿದ್ಯಾರ್ಥಿಗಳಿಗೆ ಉಚಿತ ಮಧ್ಯಾಹ್ನ ಊಟದ ಪ್ರಯುಕ್ತ “ಶಾರದಾ ಕಪ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ” 

Views: 226

ಕನ್ನಡ ಕರಾವಳಿ ಸುದ್ದಿ: ಬಸ್ರೂರು ಶ್ರೀ ಶಾರದಾ ಕಾಲೇಜು ಬಸ್ರೂರು ಇಲ್ಲಿನ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಕಾಲೇಜಿನ ಬಡ ವಿದ್ಯಾರ್ಥಿಗಳಿಗೆ ಉಚಿತ ಮಧ್ಯಾಹ್ನದ ಊಟದ ಪ್ರಯುಕ್ತ ಶಾರದಾ ಕಪ್ ಶಟಲ್ ಬ್ಯಾಡ್ಮಿಂಟನ್ ಡಬಲ್ಸ್ ಪಂದ್ಯಾಟ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡಾಕೂಟವನ್ನು ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಸಟ್ಟಾಡಿ ಶ್ರೀ ವಿಜಯ ಶೆಟ್ಟಿ ಉದ್ಘಾಟಿಸಿ ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ದೃಢತೆಯನ್ನು ಕಾಪಾಡಿಕೊಳ್ಳಲು ಸಾಧ್ಯ ಆ ನಿಟ್ಟಿನಲ್ಲಿ ಪ್ರತಿದಿನ ವ್ಯಾಯಾಮ ಯೋಗ ಹಾಗೂ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರ ಮುಖಾಂತರ ಉತ್ತಮ ದೈಹಿಕ ಸಾಮರ್ಥ್ಯವನ್ನು ಪಡೆದುಕೊಳ್ಳಬಹುದು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶಾರದಾ ಕಾಲೇಜು ಬಸ್ರೂರು ಇದರ ವಿಶ್ವಸ್ಥ ಮಂಡಳಿಯ ಸದಸ್ಯರಾದ ಶ್ರೀಮತಿ ಅನುಪಮಾ ಎಸ್ ಶೆಟ್ಟಿ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರಾವತಿ ಶೆಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಸೂರಜ್ ಕುಮಾರ್ ಶೆಟ್ಟಿ ಬಿ ಹಾಗೂ ಕಾಲೇಜಿನ ಪ್ರಾಧ್ಯಾಪಕರುಗಳು ಉಪಸ್ಥಿತರಿದ್ದರು. 

ಕಾರ್ಯಕ್ರಮವನ್ನು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವಿಶ್ವನಾಥ್ ಆಚಾರ್ಯ ನಿರೂಪಿಸಿ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ರವಿಚಂದ್ರ ವಂದಿಸಿದರು .

ಬ್ರಹ್ಮಾವರದಿಂದ ಶಿರೂರಿನ ತನಕ ಸುಮಾರು 32 ತಂಡಗಳು ಈ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. 

ಪ್ರಶಸ್ತಿ ವಿಜೇತರ ವಿವರ: 

ಪ್ರಥಮ ಸ್ಥಾನವನ್ನು ಪವನ್ ಉಪಾಧ್ಯಾಯ ಮತ್ತು ಅಭಿಷೇಕ್ ಭಟ್ ಪಡೆದುಕೊಂಡರು, ದ್ವಿತೀಯ ಸ್ಥಾನವನ್ನು ವಿಮಲೇಶ್ ಶೇಟ್ ಮತ್ತು ನಾಗೇಶ್ ಪೈ ಪಡೆದುಕೊಂಡರು, ತೃತೀಯ ಸ್ಥಾನವನ್ನು ವಿನೋದ್ ಆಚಾರ್ಯ ಮತ್ತು ಕಾರ್ತಿಕ್ ಗಿಳಿಯಾರ್ ಪಡೆದುಕೊಂಡರು.

ಚತುರ್ಥ ಸ್ಥಾನವನ್ನು ವಿಕ್ರಂ ಕಾಮತ್ ಹಾಗೂ ವಿಘ್ನೇಶ್ ಶೆಣೈ ತಮ್ಮದಾಗಿಸಿಕೊಂಡರು.

Related Articles

Back to top button