ಇತರೆ
ಕುಂದಾಪುರ:ಶಂಕರನಾರಾಯಣದಲ್ಲಿ ಕೋಳಿ ಅಂಕದ ಮೇಲೆ ಪೊಲೀಸ್ ದಾಳಿ,8 ಮಂದಿ ವಶಕ್ಕೆ

Views: 134
ಕುಂದಾಪುರ ತಾಲೂಕಿನ ಶಂಕರನಾರಾಯಣ ಸಮೀಪ ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿರುವಾಗ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ 8 ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ರೋಹಿತ್ ಶೆಟ್ಟಿ, ಚರಣ್ ರಾಜ್ , ದಿನೇಶ್ ರಾವ್, ಅರ್ಜುನ್, ಮಂಜುನಾಥ್, ಪ್ರಶಾಂತ, ದಯಾನಂದ ಪೂಜಾರಿ , ಸಂತೋಷ ಶೆಟ್ಟಿ ಎಂದು ಗುರುತಿಸಲಾಗಿದೆ.
ಪೊಲೀಸರು ಕೋಳಿ ಅಂಕಕ್ಕೆ ಬಳಸಲಾದ ಕೋಳಿಗಳು ಹಾಗೂ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.