ಶಿಕ್ಷಣ

ಪೌಷ್ಟಿಕಾಂಶಯುಕ್ತ ಬಗೆ ಬಗೆಯ ಆಟಿ ಸಂಭ್ರಮದ ಸ್ಪೆಷಲ್ ತಿಂಡಿ ತಿನಿಸುಗಳನ್ನು ತಿಂದು ಸಂಭ್ರಮಿಸಿದ ಜ್ಞಾನದಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು

ಆಟಿ ಸಂಭ್ರಮದಲ್ಲಿ ಶಾಲೆಯಲ್ಲಿಯೇ ತಯಾರಿಸಿದ ಸ್ಪೆಷಲ್ ತಿಂಡಿ ತಿನಿಸುಗಳು:ಕೆಸುವಿನ ಪತ್ರೊಡೆ, ಸುಕ್ಕಿನುಂಡೆ ಕಡಬು, ರವಾಲಡ್ಡು, ಅರಶಿನ ಎಲೆಯ ಕಡಬು, ಹಲಸಿನ ಹಣ್ಣಿನ ಕಡಬು,ಅಕ್ಕಿಉಂಡೆ, ಮಸಾಲೆ ಉಂಡೆ, ಕಣಿಲೆ ಗಸಿ, ಹೆಸರುಕಾಳು ಗಸಿ, ಕಾಯಿರೊಟ್ಟಿ, ಕೊಟ್ಟೆ ಇಡ್ಲಿ, ನುಗ್ಗಿ ಸೊಪ್ಪಿನ ಇಡ್ಲಿ ಇತ್ಯಾದಿ

Views: 197

ಕನ್ನಡ ಕರಾವಳಿ ಸುದ್ದಿ: ನಮ್ಮ ಹಿರಿಯರು ತಯಾರಿಸುತ್ತಿದ್ದ ಸಾಂಪ್ರದಾಯಿಕ ಅಡುಗೆಗಳು ಋತುಮಾನಕ್ಕೆ ತಕ್ಕಂತೆ ಇರುತ್ತಿದ್ದವು ಮತ್ತು ಆಯಾ ಕಾಲಕ್ಕೆ ಬರುವ ಸಣ್ಣಪುಟ್ಟ ಕಾಯಿಲೆಗಳಿಗೆ ಅಡುಗೆಗಳಲ್ಲೇ ಔಷಧೀಯ ಶಕ್ತಿಯೂ ಇರುತ್ತಿತ್ತು. ಹಿಂದಿನ ಕಾಲದಲ್ಲಿ ಆಟಿ ತಿಂಗಳು ಬಹಳ ಕಷ್ಟದ ಕಾಲವಾಗಿತ್ತು ನಮ್ಮ ಹಿರಿಯರು ಪರಿಸರದಲ್ಲಿ ದೊರೆಯುವ ಸೊಪ್ಪು ಗಡ್ಡೆ ಗೆಣಸುಗಳನ್ನು ಬಳಸಿ ಅರೋಗ್ಯಯುತವಾಗಿ ಬದುಕಿದ್ದರು.ಆದರೆ ಇಂದು ಪಾಶ್ಯಾತ್ಯ ತಿನಿಸಿಗೆ ಮಾರುಹೋಗಿ ವಿವಿಧ ಖಾಯಿಲೆಗೆ ತುತ್ತಾಗುತ್ತಿದ್ದಾರೆ.ಆದರೆ ಇಲ್ಲಿ ಕರಾವಳಿ ಪ್ರದೇಶ ವಿಭಿನ್ನ ಶೈಲಿಯ ಸಾಂಪ್ರದಾಯಿಕ ತಿಂಡಿ ತಿನಿಸು ಮತ್ತು ಆಹಾರ ಪದ್ಧತಿಗೆ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ 

ಏನಿದು ಆಟಿ ಸಂಭ್ರಮದ ಸ್ಪೆಷಲ್ ತಿಂಡಿ ತಿನಿಸುಗಳು?ಕೆಸುವಿನ ಪತ್ರೊಡೆ, ಸುಕ್ಕಿನುಂಡೆ ಕಡಬು, ರವಾಲಡ್ಡು ಅರಶಿನ ಎಲೆಯ ಕಡಬು, ಹಲಸಿನ ಹಣ್ಣಿನ ಕಡಬು,ಅಕ್ಕಿಉಂಡೆ, ಮಸಾಲೆ ಉಂಡೆ, ಕಣಿಲೆ ಗಸಿ, ಹೆಸರುಕಾಳು ಗಸಿ, ಕಾಯಿರೊಟ್ಟಿ, ಕೊಟ್ಟೆ ಇಡ್ಲಿ, ನುಗ್ಗಿ ಸೊಪ್ಪಿನ ಇಡ್ಲಿ, ಇತ್ಯಾದಿ ಆದರೇ ಇಂದಿನ ಯುವ ಪೀಳಿಗೆ ಆಧುನಿಕತೆಗೆ ಮಾರುಹೋಗಿ ಹಳ್ಳಿಯ ಸಾಂಪ್ರದಾಯಿಕ ಮತ್ತು ಆರೋಗ್ಯಕರವಾದ ಪೌಷ್ಟಿಕ ಆಹಾರ ಪದ್ಧತಿಯಿಂದ ದೂರ ಸರಿಯುತ್ತಿರುವುದು ನಿಜಕ್ಕೂ ವಿಪರ್ಯಾಸವೇ ಸರಿ. ಸದಾ ನವೀನ ಕಾರ್ಯಕ್ರಮದಿಂದ ವಿದ್ಯಾರ್ಥಿಗಳನ್ನು ಕ್ರಿಯಾಶೀಲರನ್ನಾಗಿ ಮಾಡುತ್ತಿರುವ ಜ್ಞಾನದಾ ವಿದ್ಯಾಸಂಸ್ಥೆಯು ಈ ನಿಟ್ಟಿನಲ್ಲಿ ಸಾಂಪ್ರದಾಯಿಕ ಮತ್ತು ಆರೋಗ್ಯಕರ ಖಾದ್ಯಗಳ ಔತಣಕೂಟ ಏರ್ಪಡಿಸಿ ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಮತ್ತು ಆರೋಗ್ಯಕರವಾದ ಪೌಷ್ಟಿಕ ಆಹಾರಗಳ ಪದ್ಧತಿಗಳ ಉಪಯೋಗ, ಮಾನಸಿಕ ಮತ್ತು ಬೌದ್ಧಿಕವಾಗಿ ದೊರೆಯುವ ಪ್ರಯೋಜನಗಳ ಕುರಿತು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಥೆಯ ಪ್ರಾಂಶುಪಾಲರಾದ ಡಾ. ರವಿದಾಸ್ ಶೆಟ್ಟಿ ತಿಳಿ ಹೇಳಿದರು.

ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಜೊತೆಗೂಡಿ ತಯಾರಿಸಿದ ಬಗೆ ಬಗೆಯ ಪೌಷ್ಟಿಕಾಂಶಯುಕ್ತ ತಿಂಡಿ ತಿನಿಸುಗಳನ್ನು ಶಿಕ್ಷಕರೊಂದಿಗೆ ಸವಿದ ಪರಿ ನಿಜಕ್ಕೂ ಅವಿಸ್ಮರಣೀಯ

ಈ ಆಟಿ ಸಂಭ್ರಮ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

 

Related Articles

Back to top button
error: Content is protected !!