ಕುಂದಾಪುರ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಸಂಸತ್ತು ಉದ್ಘಾಟನೆ

Views: 42
ಕುಂದಾಪುರ:ಇಲ್ಲಿನ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಈ ಸಾಲಿನ ವಿದ್ಯಾರ್ಥಿ ಸಂಸತ್ತು ಉದ್ಘಾಟನೆಯ ಕಾರ್ಯಕ್ರಮವು ನೆರವೇರಿತು.
ಹೋಲಿ ರೋಜರಿ ಚರ್ಚಿನ ಸಹಾಯಕ ಧರ್ಮಗುರುಗಳಾದ ಅಶ್ವಿನ್ ಅರಾನ್ನಾರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಶಾಲಾ ಸಂಸತ್ತನ್ನು ವಿದ್ಯುಕ್ತವಾಗಿ ಉದ್ಘಾಟಿಸಿ, ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವದ ಗುಣವನ್ನು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಸತತ 6 ವರ್ಷಗಳಿಂದ ಸಂಸ್ಥೆ ಶೇ.100 ರಷ್ಟು ದಾಖಲೆಯ ಫಲಿತಾಂಶ ಗಳಿಸುತ್ತಾ ಬಂದಿದ್ದು,ಪ್ರಸ್ತುತ ವರ್ಷದಲ್ಲಿಯೂ ಶೇಕಡಾ 1೦೦ ರಷ್ಟು ಫಲಿತಾಂಶ ಗಳಿಸಿ ತಾಲೂಕು, ಜಿಲ್ಲಾ, ರಾಜ್ಯ ಮಟ್ಟದಲ್ಲಿ ಗುರುತಿಸಿ ಕೊಳ್ಳಬೇಕು” ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಜ್ ಶಾಂತಿ ಎ.ಸಿ. ಉಪಸ್ಥಿತರಿದ್ದು ಶಾಲಾ ಸಂಸತ್ತಿನ ನಾಯಕರು ಹಾಗೂ ಪದಾಧಿಕಾರಿಗಳಿಗೆ ಪ್ರಮಾಣ ವಚನವನ್ನು ಬೋಧಿಸಿದರು.ಶಾಲಾ ವಿದ್ಯಾರ್ಥಿ ನಾಯಕಿ ರಿಷಿಕಾ ಜಾಟ್ ಸ್ವಾಗತಿಸಿದರು. ಮಯೊಲ್ಲಾ ಧನ್ಯವಾದ ಸಮರ್ಪಿಸಿದರು. ಡಿ ಸಾನ್ವಿ, ಅಕ್ಷಯ, ಮರಿಯಾ ವಿಯೊಲ್ಲಾ ಕಾರ್ಯಕ್ರಮವನ್ನು ನಿರೂಪಿಸಿದರು.