ಇಂಗ್ಲೆಂಡಿನಲ್ಲಿ ನೀಲ್ಕೋಡು ಶಂಕರ್ ಹೆಗಡೆ ನೇತೃತ್ವದ ಅಭಿನೇತ್ರಿ ತಂಡದವರಿಂದ ಯಕ್ಷಗಾನ ಪ್ರದರ್ಶನದ ಪ್ರಚಾರ ಸಾಹಿತ್ಯ

Views: 68
ಕನ್ನಡ ಕರಾವಳಿ ಸುದ್ದಿ: ಉತ್ತರ ಕನ್ನಡ ಜಿಲ್ಲೆಯ ನೀಲ್ಕೋಡಿನ ಅಭಿನೇತ್ರಿ ಆರ್ಟ್ ಟ್ರಸ್ಟ್ ನೇತೃತ್ವದಲ್ಲಿ ಅನುಭವಿ, ವೃತ್ತಿಪರ ಯಕ್ಷಗಾನ ಕಲಾವಿದರ ಪುಟ್ಟ ತಂಡ ಇದೀಗ ಯುಕೆ (ಇಂಗ್ಲೆಂಡ್) ಪ್ರವಾಸ ಕೈಗೊಂಡಿದೆ. ಅಲ್ಲಿನ ಅನಿವಾಸಿ ಯಕ್ಷಗಾನ ಅಭಿಮಾನಿ ಮಂಡಳಿ (ಅಯಮ) ಪ್ರದರ್ಶನಗಳನ್ನು ನಿರ್ವಹಿಸುವುದು.
ತಂಡದಲ್ಲಿ ಭಾಗವತ ಪ್ರಸನ್ನ ಭಟ್ ಬಾಳ್ಕಲ್, ಮದ್ದಲೆಗಾರ ರಾಘವೇಂದ್ರ ಯಲಗುಪ್ಪ, ಚೆಂಡೆವಾದಕ ಗಣೇಶ ಗಾಂವ್ಕರ್, ವೇಷಧಾರಿಗಳಾದ ಶಂಕರ ಹೆಗಡೆ ನೀಲ್ಕೋಡು, ಸುಬ್ರಹ್ಮಣ್ಯ ಯಲಗುಪ್ಪ, ಸನ್ಮಯ್ ಭಟ್, ಯುಕೆಯಲ್ಲಿ ನೆಲೆಸಿರುವ ಹವ್ಯಾಸಿ ಕಲಾವಿದರಾದ ಯೋಗೀಂದ್ರ ಮರವಂತೆ, ರಾಜೀವ ಹೆಗಡೆ, ಡಾ.ಗುರುಪ್ರಸಾದ್ ಪಟ್ವಾಲ್ ಜೊತೆಯಾಗುವರು.
ತಂಡ 20ದಿನ ಯುಕೆಯಲ್ಲಿ ತಂಗಲಿದ್ದು, ಸದ್ಯ ಜೂನ್ 20ಕ್ಕೆ ಬಾಸಿಲ್ಡನ್ನಲ್ಲಿ, 21ಕ್ಕೆ ರೀಡಿಂಗ್ನಲ್ಲಿ 22ಕ್ಕೆ ಕಾರ್ಡಿಫ್ನಲ್ಲಿ, 28ಕ್ಕೆ ಡರ್ಬಿಯಲ್ಲಿ 29ಕ್ಕೆ ಮ್ಯಾಂಚೆಸ್ಟರ್ನಲ್ಲಿ ಜುಲೈ 5ಕ್ಕೆ ಸಾಲಿಹುಲ್ನಲ್ಲಿ ಜುಲೈ6 ಕ್ಕೆ “ಗಾನ ನಾಟ್ಯ ವೈಭವ”
ಲಂಕಾದಹನ, ಕಂಸವದೆ, ಶಮಂತಕಮಣಿ, ಗದಾಯುದ್ಧ, ಪಾಂಚಜನ್ಯ, ಭಸ್ಮಾಸುರ ಮೋಹಿನಿ ಯಕ್ಷಗಾನ ಪ್ರಸಂಗದ ಪ್ರದರ್ಶನಗಳು ನಿಗದಿಯಾಗಿವೆ ಎಂದು ‘ಅಯಮ’ ಪ್ರಕಟಿಸಿದೆ.