ಶಿಕ್ಷಣ
ಪದವಿ ಪೂರ್ವ ಪರಿಷ್ಕೃತ ಪಠ್ಯಪುಸ್ತಕಗಳು ಅಲಭ್ಯ: ವಿದ್ಯಾರ್ಥಿಗಳು ಗೊಂದಲ

Views: 0
ರಾಜ್ಯದ ಪ್ರಥಮ ಮತ್ತು ದ್ವಿತೀಯ ಪದವಿ ಪೂರ್ವ ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಬದಲಾವಣೆಗಳಾಗಿದ್ದು, ಪರಿಷ್ಕೃತ ಪಠ್ಯಪುಸ್ತಕ ಸಿಗದಿರುವ ಕಾರಣಕ್ಕೆ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ.
ಪರಿಷ್ಕೃತ ವಿಷಯಗಳಲ್ಲಿ ಭೌತಶಾಸ್ತ್ರ ,ರಸಾಯನಶಾಸ್ತ್ರ, ಗಣಿತಶಾಸ್ತ್ರ, ಜೀವಶಾಸ್ತ್ರ, ಕಂಪ್ಯೂಟರ್ ಸೈನ್ಸ್ ,ಅರ್ಥಶಾಸ್ತ್ರ, ಅಕೌಂಟೆನ್ಸಿ ಮತ್ತು ವ್ಯವಹಾರ ಅಧ್ಯಯನಗಳ ಹೊಸ ಆವೃತ್ತಿಯ ಪಠ್ಯಪುಸ್ತಕಗಳನ್ನು ಖರೀದಿಸಲುವಿದ್ಯಾರ್ಥಿಗಳಿಗೆ ತಿಳಿಸಲಾಗಿತ್ತು ಆದರೆ, ಪರಿಷ್ಕೃತ ಪಠ್ಯಪುಸ್ತಕ ಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗದೇ ಸಮಸ್ಯೆಗೆ ಕಾರಣವಾಗಿದೆ.
ಈಗಾಗಲೇ ಹಳೆಯ ಪುಸ್ತಕಗಳನ್ನು ಖರೀದಿಸಿದ ವಿದ್ಯಾರ್ಥಿಗಳಿಗೆ ಪಠ್ಯ ಕ್ರಮದಿಂದ ತೆಗೆದುಹಾಕಲಾದ ಪಾಠಗಳ ಬಗ್ಗೆ ತಿಳಿಸುವ ಮೂಲಕ ಮಾರ್ಗದರ್ಶನ ನೀಡುವಂತೆ ಮಂಡಳಿಯು ಉಪನ್ಯಾಸಕರಿಗೆ ಸೂಚನೆ ನೀಡಿದೆ, ಆದರೆ, ಇದು ಯಾವ ಪಠ್ಯಪುಸ್ತಕಗಳನ್ನು ಅನುಸರಿಸಬೇಕು ಎಂಬ ಗೊಂದಲವನ್ನು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಲ್ಲಿ ಉಂಟಾಗಿದೆ.