ಶಿಕ್ಷಣ
ಈ ವಷ೯ವೇ ಪಠ್ಯ ಪರಿಷ್ಕರಣೆ : ಶಿಕ್ಷಣ ಸಚಿವ ಮಧು ಬಂಗಾರಪ್ಪ

Views: 0
ಪಠ್ಯ ಪರಿಷ್ಕರಣೆ ಬಗ್ಗೆ ಯಾವುದೇ ಗೊಂದಲವಿಲ್ಲ ಸರಿಯಾಗಿಲ್ಲದಿರುವುದನ್ನು ಮಕ್ಕಳು ಯಾವುದೇ ಕಾರಣಕ್ಕೂ ಓದಬಾರದು. ಆದ್ದರಿಂದ ಈ ಶೈಕ್ಷಣಿಕ ವಷ೯ಕ್ಕೆ ಪಠ್ಯ ಪರಿಷ್ಕರಣೆ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚಚಿ೯ಸಿ, ಕೆಲವು ಪಠ್ಯಗಳನ್ನು ಕೈ ಬಿಡಲಾಗುವುದು, ಪಠ್ಯ ಪುಸ್ತಕ ವಿಚಾರದಲ್ಲಿ ಮಕ್ಕಳ ಒಳಿತಿಗೆ ಸರಿಯಾದ ಕ್ರಮ ಕೈಗೊಳ್ಳುತ್ತೇವೆ, ತಜ್ಞರು ಆಕ್ಷೇಪಾಹ೯ ವಿಷಯಗಳನ್ನು ಪರಿಪ್ಕರಿಸುವ ಬಗ್ಗೆ ತಜ್ಞರು ಶಿಫಾರಸು ಮಾಡಲಿದ್ದಾರೆ, ಆರಂಭದಲ್ಲಿ ಸೇತುಬಂಧ ನಡೆಸಿ, ಮಕ್ಕಳಿಗೆ ಏನು ಓದಿಸಬೇಕು, ಯಾವುದು ಬೇಡ ಎಂಬುದನ್ನು ನಿಧ೯ರಿಸಿ ಮಕ್ಕಳ ಭವಿಷ್ಯಕ್ಕೆ ಒಳ್ಳೆಯ ಅಂಶ ಇದ್ದರೆ ಉಳಿಸಲಾಗುತ್ತದೆ ಎಂದರು.