ಶಿಕ್ಷಣ

ವಾರ್ಷಿಕ ಸಂಚಿಕೆ ಅನಾವರಣ  

Views: 157

ಕುಂದಾಪುರ : ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಮಟ್ಟದ ವಾರ್ಷಿಕ ಸಂಚಿಕೆ ಸ್ಪರ್ಧೆಯಲ್ಲಿ ಗಮನ ಸೆಳೆದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಸಂಚಿಕೆ ‘ಶಿಖರ’ ಸಂಚಿಕೆಯನ್ನು ಕಾಲೇಜು ವಾರ್ಷಿಕೋತ್ಸವ ಸಂದರ್ಭದಲ್ಲಿ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಬಿ.ಎಮ್. ಸುಕುಮಾರ ಶೆಟ್ಟಿಯವರು ಅನಾವರಣಗೊಳಿಸಿ ಶುಭಹಾರೈಸಿದರು.

ಮಂಗಳೂರಿನ ಶ್ರೀ ರಾಮಕೃಷ್ಣ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಎಮ್. ಬಾಲಕೃಷ್ಣ ಶೆಟ್ಟಿ ಹಾಗೂ ಬೆಂಗಳೂರಿನ ಟೊಯೊಟಾ ಕಿರ್ಲೊಸ್ಕರ್ ಮೋರ‍್ಸ್ನ ಗ್ರೂಪ್ ಡಿಪಾರ್ಟ್ಮೆಂಟ್‌ನ ಮುಖ್ಯಸ್ಥರಾದ ಶ್ರೀ ದೀಪಕ್ ಶೆಟ್ಟಿ, ಬಾರ್ಕೂರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಶಿಖರ ಸಂಚಿಕೆಯ ನಿರ್ವಾಹಕ ಸಂಪಾದಕ ಶ್ರಿ ಪ್ರವೀಣ್ ಮೊಗವೀರ ಕೃತಜ್ಞತಾ ಮಾತುಗಳನ್ನಾಡಿದರು. ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕಿ ಮೋನಿಕಾ ಡಿಸೋಜಾ ನಿರೂಪಿಸಿದರು.

Related Articles

Back to top button