ಇತರೆ
ಕುಂದಾಪುರ: ಬೇಳೂರಿನಲ್ಲಿ ಮನೆ ನಿರ್ಮಾಣದ ಅಂತಸ್ತಿನಿಂದ ಆಯತಪ್ಪಿ ಬಿದ್ದು ಸಾವು

Views: 242
ಕನ್ನಡ ಕರಾವಳಿ ಸುದ್ದಿ:ಮನೆ ನಿರ್ಮಾಣ ಹಂತದ ಸ್ಲಾಬ್ ನಿಂದ ಕೆಳಗಡೆ ಬಿದ್ದು ಮನೆಯ ಯಜಮಾನ ಮೃತಪಟ್ಟ ಘಟನೆ ಬೇಳೂರು ದೇವಸ್ಥಾನಬೆಟ್ಟು, ಕಲ್ಮಂಡೆಯಲ್ಲಿ ಸಂಭವಿಸಿದೆ.
ಮನೆಯ ಯಜಮಾನ ಗೋಪಾಲ ಆಚಾರ್ಯ (62) ಮೃತಪಟ್ಟ ವ್ಯಕ್ತಿ
ಮರದ ಕೆಲಸಗಾರರಾದ ಇವರು ಬೇಳೂರಿನಲ್ಲಿ ಹೊಸ ಮನೆಯನ್ನು ನಿರ್ಮಿಸುತ್ತಿದ್ದರು. ಮನೆಯ ಕೆಲಸವನ್ನು ನೋಡಲು ಮಗ ಕಾರ್ತಿಕ್‌ನೊಂದಿಗೆ ಸ್ಥಳಕ್ಕೆ ತೆರಳಿದ್ದರು.
ಈ ಸಂದರ್ಭ ಮೊದಲ ಅಂತಸ್ತಿಗೆ ತೆರಳಿ ಕೆಲಸವನ್ನು ನೋಡುತ್ತಿರುವಾಗ ಆಯತಪ್ಪಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪರೀಕ್ಷಿಸಿದ ವೈದ್ಯರು ಗೋಪಾಲ ಆಚಾರ್ಯ ಅವರು ಅದಾಗಲೇ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.