ಉಡುಪಿ ಪದ್ಮಶಾಲಿ. ತರುಣ ವೃಂದ 51 ನೇ ವಷ೯ದ ಉಚಿತ ಪುಸ್ತಕ ವಿತರಣೆ

Views: 336
ಉಡುಪಿ : ಪದ್ಮಶಾಲಿ ತರುಣ ವೃಂದ ಶ್ರೀ ವೀರಭದ್ರ ದೇವಸ್ಥಾನ ಕಿನ್ನಿಮುಲ್ಕಿ ಉಡುಪಿ ಇದರ ವತಿಯಿಂದ 51 ನೇ ವರ್ಷದ ಪುಸ್ತಕ ವಿತರಣಾ ಸಮಾರಂಭವು ತಾರೀಖು 22.05.2023 ಸೋಮವಾರ ಸಾಯಂಕಾಲ 03 ಘಂಟೆಗೆ ಕಿನ್ನಿಮುಲ್ಕಿ ಶ್ರೀ ವೀರಭದ್ರ ಕಲಾಭವನದಲ್ಲಿ ಜರಗಿತು
ಪದ್ಮಶಾಲಿ ತರುಣ ವೃಂದದ ಉಪಾಧ್ಯಕ್ಷರಾದ ನಾಗರಾಜ್ ಕಿನ್ನಿಮುಲ್ಕಿ ಇವರ
51 ನೇ ವರ್ಷದ ಪುಸ್ತಕ ವಿತರಣಾ ಸಮಾರಂಭದ ಉದ್ಘಾಟನೆಯನ್ನು ಕಿನ್ನಿಮುಲ್ಕಿ ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಪ್ರಭಾಶಂಕರ ಪದ್ಮಶಾಲಿ ನಡೆಸಿದರು
ಸಮಾರಂಭದ ಮುಖ್ಯ ಅತಿಥಿಗಳಾಗಿ ಶ್ರೀ ಶರತ್ ಕಿನ್ನಿಮುಲ್ಕಿ, ಶ್ರೀ ಅರುಣ್ ಕುಮಾರ್, ಶ್ರೀ ಶೈಲೇಶ್* *ಶೆಟ್ಟಿಗಾರ್ ಕೊಡಂಗಳ, ಶ್ರೀಮತಿ ಸೌಮ್ಯ ಶೆಟ್ಟಿಗಾರ್ ಕೊಡಂಗಳ ಭಾಗವಹಿಸಿದ್ದರು.
51 ನೇ ವರ್ಷದ ಪುಸ್ತಕ ವಿತರಣೆಯ ಸಂಪೂರ್ಣ ವೆಚ್ಚವನ್ನು ತನ್ನ ಪತ್ನಿ ದಿ. ಬಿಂದಿಯಾ ಇವರ ಸವಿನೆನಪಿಗಾಗಿ ಭರಿಸಿದ ಶ್ರೀ ಶರತ್ ಕಿನ್ನಿಮುಲ್ಕಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು
51 ನೇ ವರ್ಷದ ಪುಸ್ತಕ ವಿತರಣೆಯ ಫಲಾನುಭವಿಗಳಾಗಿ ಸುಮಾರು 100 ಕ್ಕೂ ಅಧಿಕ ಮಕ್ಕಳು ಭಾಗವಹಿಸಿ ಪ್ರಯೋಜನ ಪಡೆದುಕೊಂಡರು ಎಲ್.ಕೆ.ಜಿ ಯಿಂದ ಪಿಯುಸಿ ತನಕದ ಮಕ್ಕಳಿಗೆ ಪುಸ್ತಕ ವಿತರಿಸಲಾಯಿತು
ಈ ಕಾರ್ಯಕ್ರಮದಲ್ಲಿ ಶ್ರೀಮತಿ ವಂದನಾ ಅರವಿಂದ್ ಮತ್ತು ರಿಜುತಾ ಪ್ರಾರ್ಥಿಸಿದರು. ದೀಪಕ್ ಕುಮಾರ್ ಕಿನ್ನಿಮುಲ್ಕಿ ಸ್ವಾಗತಿಸಿ, ಅರವಿಂದ ಪದ್ಮಶಾಲಿ ಪ್ರಸ್ತಾವಿಸಿದರು.
51 ನೇ ಪುಸ್ತಕ ವಿತರಣೆಗೆ ಧನಸಹಾಯ ನೀಡಿ ಸಹಕರಿಸಿದ ದಾನಿಗಳ ಪಟ್ಟಿಯನ್ನು ಶ್ರೀಮತಿ ಮಂಜುಳ ಭಾರತೀಶ್ ಓದಿ ಹೇಳಿದರು, ಪುಸ್ತಕ ವಿತರಣೆಯ ಫಲಾನುಭವಿಗಳ ಪಟ್ಟಿಯನ್ನು ಶ್ರೀಮತಿ ಗೀತಾ ಶೆಟ್ಟಿಗಾರ್ ಕನ್ನರ್ಪಾಡಿ ವಾಚಿಸಿದರು. ಕಾರ್ಯಕ್ರಮವನ್ನು ಶ್ರೀಮತಿ ಮಮತಾ ರೂಪೇಶ್ ಶೆಟ್ಟಿಗಾರ್ ನಿರೂಪಿಸಿ, ವೃಂದದ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಶೆಟ್ಟಿಗಾರ್ ಕರಂದಾಡಿ ಧನ್ಯವಾದವಿತ್ತರು
ವರದಿ: ಬಿ. ವಿ. ಶೆಟ್ಟಿಗಾರ, ಉಡುಪಿ,