ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ “ದಿವ್ಯ ಬಲಿಪೀಠ ಸೇವಕರ ದಿನಾಚರಣೆ”

Views: 0
ಕುಂದಾಪುರ: ಭಾನುವಾರ ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ದಿವ್ಯ ಬಲಿಪೀಠದ ಸೇವಕರ ದಿನವನ್ನು ಆಚರಿಸಿ, ದಿವ್ಯ ಬಲಿಪೂಜೆಯನ್ನು ಅರ್ಪಿಸಲಾಯಿತು.
ಕುಂದಾಪುರ ಹೋಲಿ ರೋಜರಿ ಚರ್ಚಿನ ಸಹಾಯ ಧರ್ಮಗುರುಗಳಾದ ವಂದನೀಯ ಫಾ. ಅಶ್ವಿನ್ ಆರಾನ್ನಾ ಪ್ರಧಾನ ಯಾಜಕರಾಗಿ ಈ ದಿವ್ಯ ಬಲಿಪೂಜೆಯನ್ನು ನೆರವೇರಿಸಿ, ದಿವ್ಯ ಬಲಿಪೀಠದ ಸೇವಕರ ಪಾಲಕ ಸಂತ ಬರ್ಕ್ ಮನ್ಸ್ ರಿಗೆ ದಿವ್ಯ ಬಲಿಪೀಠದ ಸೇವೆ ಮಾಡುವುದರಲ್ಲಿ ಅತೀವ ಶ್ರದ್ಧೆ ಹಾಗೂ ಪ್ರೀತಿಯಿತ್ತು. ಅದರಂತೆ ದಿವ್ಯ ಬಲಿಪೀಠದ ಸೇವಕರು ಅವರ ಪಾಲಕ ಸಂತರ ಆದರ್ಶವನ್ನು ಮೈಗೂಡಿಸಿಕೊಂಡು, ಯೇಸು ಕ್ರಿಸ್ತರು ತೋರಿಸಿದ ಹಾದಿಯಲ್ಲಿ ನಡೆದು, ಮುಂದೊಂದು ದಿನ ದೇವರ ಕರೆಗೆ ಓಗೊಟ್ಟು ಯಾಜಕರಾಗಿ ದೇವರ ಸೇವೆ ಮಾಡುವಂತಾಗಲಿ ಎಂದು ಪ್ರಾರ್ಥಿಸಿದರು.
ಕುಂದಾಪುರ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳಾದ ಅತೀ ವಂದನೀಯ ಫಾ. ಸ್ಟ್ಯಾನಿ ತಾವ್ರೋರವರು ಸಹ ಯಾಜಕರಾಗಿ ದಿವ್ಯ ಬಲಿಪೂಜೆಯಲ್ಲಿ ಭಾಗವಹಿಸಿ ದೇವರ ಶುಭ ಸಂದೇಶವನ್ನು ವಾಚಿಸಿ ಅರ್ಥಭರಿತವಾದ ಪ್ರಸಂಗವನ್ನು ನೀಡಿದರು. ದಿವ್ಯ ಬಲಿಪೂಜೆಯ ಕೊನೆಯಲ್ಲಿ ದಿವ್ಯ ಬಲಿಪೀಠದ ಸೇವಕರು ಸಮರ್ಪಣಾ ಪ್ರಾರ್ಥನೆಯನ್ನು ವಾಚಿಸಿದರು.






