ಕರಾವಳಿ
ಉಡುಪಿ :ರೈಲಿನಲ್ಲಿ 63 ಲಕ್ಷ ರೂ. ಚಿನ್ನಾಭರಣ ಕಳ್ಳತನ

Views: 149
ಉಡುಪಿ: ರೈಲು ಪ್ರಯಾಣದ ಸಂದರ್ಭ ಪ್ರಯಾಣಿಕರೋರ್ವರ ಒಡವೆ ಕಳವಾದ ಪ್ರಕರಣ ಬೆಳಕಿಗೆ ಬಂದಿದೆ.
ಅವಿನಾಶ್ ಅವರು ನ. 15ರಂದು ಕುಟುಂಬದ ಸದಸ್ಯರೊಂದಿಗೆ ಮಂಗಳೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಮುಂಬಯಿಂದ ಉಡುಪಿ ಕಡೆಗೆ ಪ್ರಯಾಣಿಸುತ್ತಿದ್ದರು. ಒಡವೆ ಹಾಗೂ ಬಟ್ಟೆಗಳಿದ್ದ 4 ಸೂಟ್‌ಕೇಸ್‌ಗಳನ್ನು ಬೀಗ ಹಾಕದೇ ಜಿಪ್ ಲಾಕ್ ಮಾಡಿ ಇಟ್ಟಿದ್ದು, ಇಂದ್ರಾಳಿ ನಿಲ್ದಾಣದಲ್ಲಿ ಇಳಿದು ಮನೆಗೆ ಹೋಗಿ ಸಂಜೆ ಬ್ಯಾಗ್ ತೆರೆದಾಗ 2 ಬ್ಯಾಗ್‌ಗಳಲ್ಲಿ ಇಟ್ಟಿದ್ದ 63 ಲಕ್ಷ ರೂ. ಬೆಲೆಬಾಳುವ 900 ಗ್ರಾಂ ಚಿನ್ನದ ಒಡವೆಗಳು ಕಳ್ಳತನವಾಗಿರುವುದು ತಿಳಿಯಲಾಗಿದೆ.
ಪನ್ವೇಲ್ ಮತ್ತು ಕಂಕಾವ್ಲಿ ರೈಲು ನಿಲ್ದಾಣಗಳ ನಡುವೆ ಎಲ್ಲೋ ಕಳ್ಳತನ ನಡೆದಿದೆ ಎಂದು ದೂರುದಾರರು ಶಂಕಿಸಿದ್ದಾರೆ. ದೂರಿನ ಆಧಾರದ ಮೇಲೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 303(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.






