ಯುವಜನ
ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿ ಗಾರೆ ಕೆಲಸಕ್ಕೆಂದು ಬಂದ ಯುವತಿ ನೇಣಿಗೆ ಶರಣು

Views: 417
ಕನ್ನಡ ಕರಾವಳಿ ಸುದ್ದಿ: ಹೊಟ್ಟೆ ಪಾಡಿಗಾಗಿ ಗಾರೆ ಕೆಲಸಕ್ಕೆ ಬಂದಿದ್ದ ಯುವತಿ ಇದ್ದಕ್ಕಿದ್ದಂತೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಕುರುಬರಹಳ್ಳಿಯಲ್ಲಿ ನಡೆದಿದೆ.
18 ವರ್ಷದ ಭೀಮವ್ವ ಆತ್ಮಹತ್ಯೆಗೆ ಶರಣಾದ ಯುವತಿ. ಮೃತ ಭೀಮವ್ವ ಯಾದಗಿರಿ ಮೂಲದವರು. ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿ ಹೊಟ್ಟೆಪಾಡಿಗಾಗಿ ಗಾರೆ ಕೆಲಸಕ್ಕೆಂದು ಬೆಂಗಳೂರಿಗೆ ಬಂದಿದ್ದರು. ತಾಯಿ ಭಾಗ್ಯಮ್ಮ ಜೊತೆ ಗಾರೆ ಕೆಲಸಕ್ಕೆ ಹೋಗಿ ಬಂದವಳು ಮನೆಯಲ್ಲಿ ಏಕಾಏಕಿ ನೇಣಿಗೆ ಕೊರಳೊಡ್ಡಿದ್ದಾಳೆ.
ಭಾಗ್ಯಮ್ಮ-ಮಲ್ಲಣ್ಣ ದಂಪತಿಯ ನಾಲ್ವರು ಹೆಣ್ಣುಮಕ್ಕಳಲ್ಲಿ ಭೀಮವ್ವ ಹಿರಿಯ ಮಗಳು. ತಂದೆ-ತಾಯಿ ಜೊತೆ ಕೆಲಸಕ್ಕೆ ಹೋಗಿದ್ದ ಭೀಮವ್ವ ಮಧ್ಯಾಹ್ನ ಮನೆಗೆ ಬಂದು ನೇಣಿಗೆ ಶರಣಾಗಿದ್ದಾಳೆ. ಯುವತಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






