ಶಿಕ್ಷಣ
ವಿಜ್ಞಾನ, ಗಣಕ ವಿಜ್ಞಾನ ವಿದ್ಯಾರ್ಥಿಗಳಿಂದ ಕೈಗಾರಿಕಾ ಮತ್ತು ತಂತ್ರಜ್ಞಾನ ಕೇಂದ್ರಕ್ಕೆ ಬೇಟಿ

Views: 0
ಕುಂದಾಪುರ : ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿಜ್ಞಾನ ಮತ್ತು ಗಣಕವಿಜ್ಞಾನ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಕೈಗಾರಿಕಾ ಮತ್ತು ತಂತ್ರಜ್ಞಾನ ವಿಭಾಗದ ಭೇಟಿ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ವಿದ್ಯಾರ್ಥಿಗಳು ಮಂಗಳೂರು ವಿಶ್ವ ವಿದ್ಯಾನಿಲಯದ ಡೇಟಾ ಸೆಂಟರ್ ಹಾಗೂ ಮೈಕ್ರೋಟ್ರೋನ್ ಸೆಂಟರ್ ಗೆ ಭೇಟಿ ನೀಡಿ ಅಲ್ಲಿನ ಕಾರ್ಯವಿಧಾನಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು . ಇದೇ ಸಂದರ್ಭದಲ್ಲಿ ಮಂಗಳಗಂಗೋತ್ರಿ ಗ್ರಂಥಾಲಯಕ್ಕೆ ಭೇಟಿ ನೀಡಿದ ಸುಮಾರು 60 ವಿದ್ಯಾರ್ಥಿಗಳು ಅಲ್ಲಿನ ಗ್ರಂಥ ನಿರ್ವಹಣೆ ಹಾಗೂ ದತ್ತಾಂಶಗಳ ನಿರ್ವಹಣೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದರು. ಈ ಸಂದರ್ಭ ವಿಶ್ವವಿದ್ಯಾನಿಲಯದ ಡೇಟಾ ಸೆಂಟರ್ ನ ಮುಖ್ಯಸ್ಥೆ ಶ್ರೀಮತಿ ಶಶಿರೇಖಾ, ಡಾ| ಬಿ.ಬಿ. ಹೆಗ್ಡೆ ಕಾಲೇಜು ಕುಂದಾಪುರ ಇದರ ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕರಾದ ಶ್ರೀ ಹರೀಶ್ ಕಾಂಚನ್, ಶ್ರೀಕಾಂತ್ ಮತ್ತು ಮೇಘಾ ಉಪಸ್ಥಿತರಿದ್ದರು.