ಬಿಗ್ಬಾಸ್ ಮನೆಯ ಬಾತ್‌ರೂಂನಲ್ಲಿ ಏಕಾಏಕಿ ಪ್ರಜ್ಞೆ ತಪ್ಪಿ ಬಿದ್ದ ಚೈತ್ರಾ ಕುಂದಾಪುರ, ಆಸ್ಪತ್ರೆಗೆ ದಾಖಲು

Views: 278
ಕನ್ನಡ ಕರಾವಳಿ ಸುದ್ದಿ: ಬಿಗ್‌ಬಾಸ್ ಮನೆಯ 11ರ ಸ್ಪರ್ಧಿಯಾಗಿದ್ದ ಚೈತ್ರಾ ಕುಂದಾಪುರ ಏಕಾಏಕಿ ಬಾತ್ ರೂಂನಲ್ಲೇ ಕುಸಿದು ಬಿದ್ದಿದ್ದಾರೆ.

ಇನ್ನೂ ಇದನ್ನು ಗಮನಿಸಿದ ಬಿಗ್‌ಬಾಸ್ ಮನೆಯ ಗೌತಮಿ ಹಾಗೂ ಮೋಕ್ಷಿತಾಗೆ ಕೂಡಲೇ ಬಾತ್ರೂಂಗೆ ಹೋಗಿ ಚೈತ್ರಾ ಅವರಿಗೆ ಸಹಾಯ ಮಾಡಿ ಅಂತ ಹೇಳಿದ್ದಾರೆ. ಬಿಗ್ಬಾಸ್ ವಾಯ್ಸ್ ಕೇಳುತ್ತಿದ್ದಂತೆ ಗೌತಮಿ ಹಾಗೂ ಮೋಕ್ಷಿತಾ ಬಾತ್ ರೂಂಗೆ ಓಡಿ ಹೋಗಿದ್ದಾರೆ.

ಆಗ ಚೈತ್ರಾ ಅವರು ನೆಲದ ಮೇಲೆ ಬಿದ್ದಿದ್ದರು. ಆ ಕೂಡಲೇ ಅವರ ಮುಖಕ್ಕೆ ತಣ್ಣೀರಿನಿಂದ ವರೆಸಿದ್ದಾರೆ. ಆದರೂ ಚೈತ್ರಾ ಅವರು ಎದ್ದೇಳಲ್ಲಿಲ್ಲ. ಹೀಗಾಗಿ ಬಿಗ್‌ಬಾಸ್ ಮನೆಯ ಚೈತ್ರಾ ಕುಂದಾಪುರ ಅವರನ್ನು ಕನ್ಫೆಕ್ಷನ್ ರೂಂ ಕರೆ ತನ್ನಿ ಅಂತ ಹೇಳಿದ್ದರು. ಬಳಿಕ ಎಲ್ಲ ಸ್ಪರ್ಧಿಗಳು ಚೈತ್ರಾ ಅವರನ್ನು ಕನ್ಫೆಕ್ಷನ್ ರೂಂಗೆ ಕರೆದುಕೊಂಡು ಹೋಗಿದ್ದಾರೆ.ಎತ್ತಿಕೊಂಡ ಬರುವಾಗ ಚೈತ್ರಾ ಪರಿಸ್ಥಿತಿ ಗಂಭೀರವಾಗಿದ್ದಂತೆ ಕಾಣಿಸಿದೆ.
ಮೊದಲಿನ ಸಂಚಿಕೆಯಲ್ಲಿ ಚೈತ್ರಾ ಕುಂದಾಪುರ ಮತ್ತು ಶಿಶಿರ್ ನಡುವೆ ದೊಡ್ಡ ಜಗಳ ಆಗಿತ್ತು. ಆಗ ಚೈತ್ರಾ ಮೇಲೆ ಶಿಶಿರ್ ಅವರು ಸಿಕ್ಕಾಪಟ್ಟೆ ಕೂಗಾಡಿದ್ದರು. ಅನೇಕರ ಜೊತೆ ಚೈತ್ರಾ ಕಿರಿಕ್ ಮಾಡಿಕೊಂಡಿದ್ದಾರೆ. ಅನಗತ್ಯವಾಗಿ ಜೋರು ಧ್ವನಿಯಲ್ಲಿ ಮಾತನಾಡುವ ಮೂಲಕ ಅವರು ಕಿರಿಕ್ಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಹಾಗಾಗಿ ನಾಮಿನೇಷನ್ ವೇಳೆ ಅವರು ಅನೇಕರ ಟಾರ್ಗೆಟ್ ಆಗುತ್ತಿದ್ದಾರೆ.






