ಸಾಂಸ್ಕೃತಿಕ

ನಟ- ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಪ್ರಕರಣ: ಮತ್ತಷ್ಟು ಟ್ವಿಸ್ಟ್!

Views: 225

ಕನ್ನಡ ಕರಾವಳಿ ಸುದ್ದಿ: ಮಠ ಖ್ಯಾತಿಯ ವಿಭಿನ್ನ ಚಿತ್ರಗಳನ್ನು ನೀಡಿದ ಸ್ಪೆಷಲ್ ಡೈರೆಕ್ಟರ್. ರಂಗನಾಯಕನ ಪರಿಚಯಿಸಿದ ಪ್ರತಿಭಾವಂತ. ಎದ್ದೇಳು ಮಂಜುನಾಥ ಅನ್ನೋ ಡಿಫರೆಂಟ್ ಕಥೆ ಹೇಳಿದ್ದ ಗುರುಪ್ರಸಾದ್ ನಿಜ ಜೀವನದಲ್ಲಿ ದುರಂತ ಅಂತ್ಯ ಕಂಡಿದ್ದಾರೆ. ಇವರ ಸಾವಿನ ಸುತ್ತ ಅನುಮಾನಗಳು ಹುತ್ತ ಬೆಳೆದಿದ್ದು, ಇದನ್ನು ಬೇಧಿಸಲು ಹೊರಟ ಪೊಲೀಸರಿಗೆ ಕೆಲವೊಂದು ಇಂಟ್ರೆಸ್ಟಿಂಗ್ ಅಂಶಗಳು ಲಭ್ಯವಾಗಿದೆ.

ಗುರುಪ್ರಸಾದ್ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಮಾದನಾಯಕಹಳ್ಳಿ ಠಾಣೆ ಪೊಲೀಸರು ಸ್ಪೆಷಲ್ ಡೈರೆಕ್ಟರ್ ಸಾವಿನ ನಿಗೂಢತೆಯನ್ನು ಭೇದಿಸುವ ಪ್ರಯತ್ನದಲ್ಲಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಕೂಡ ಪೊಲೀಸರ ಕೈಸೇರಿದೆ, ಗುರುಪ್ರಸಾದ್ ದೇಹದಲ್ಲಿ ಯಾವುದೇ ವಿಷಕಾರಿ ಅಂಶ ಪತ್ತೆಯಾಗಿಲ್ಲ, ಆದ್ರೆ ಉಸಿರುಗಟ್ಟಿ ಸಾವು ಅಂತ ವರದಿ ಹೇಳಿದೆ. ಹೀಗಾಗಿ ಗುರುಪ್ರಸಾದ್ ಆತ್ಮಹತ್ಯೆ ಪ್ರಕರಣ ಮತ್ತಷ್ಟು ಟ್ವಿಸ್ಟ್ ಪಡೆದಿದೆ.

ಗುರುಪ್ರಸಾದ್ ಆತ್ಮಹತ್ಯೆಗೆ ಮುನ್ನ ಮಾಡಿದ್ದ ಪ್ಲಾನ್ ಬಯಲಾಗಿದೆ. ಆತ್ಮಹತ್ಯೆಗೂ ಮುನ್ನ ಹೊಸ ಹಗ್ಗ, ಪರದೆಗಳ ಖರೀದಿ ಮಾಡಿದ್ದು ಮನೆಯ ಡೋರ್, ಕಿಟಕಿ ಲಾಕ್ ಮಾಡಿದ್ದರು ಎನ್ನಲಾಗಿದೆ. ಹೀಗಾಗಿ ಕಿಟಕಿ ಕರ್ಟನ್ ಮೇಲೆ ಪರದೆ ಕಟ್ಟಿದ್ದರಿಂದ ವಾಸನೆ ಬಂದಿಲ್ಲ, 6 ದಿನಗಳ ಬಳಿಕ ವಾಸನೆ ಬಂದಿದ್ದು ಆತ್ಮಹತ್ಯೆ ವಿಚಾರ ಬಯಲಾಗಿದೆ. ಇನ್ನು ಮೃತದೇಹ ಶಿಫ್ಟ್ ಬಳಿಕ ಫ್ಲ್ಯಾಟ್ನಲ್ಲಿ ಜಾಲಾಡಿದ್ದ ಪೊಲೀಸರಿಗೆ ಯಾವುದೇ ಡೆತ್ನೋಟ್ ಪತ್ತೆಯಾಗಿರಲಿಲ್ಲ.

ಇನ್ನು ಗುರುಪ್ರಸಾದ್ ಕಳೆದ ಆರು ತಿಂಗಳಿಂದ ಎರಡನೇ ಪತ್ನಿ ಬಿಟ್ಟು ಒಂಟಿಯಾಗಿದ್ದರು ಎನ್ನಲಾಗಿದೆ. 4 ಮೊಬೈಲ್ಗಳನ್ನು ಬಳಸುತ್ತಿದ್ದ ಗುರುಪ್ರಸಾದ್ ಎಲ್ಲವನ್ನೂ ಫ್ಲೈಟ್ ಮೂಡ್ನಲ್ಲಿ ಇಡ್ತಾ ಇದ್ರು ಎನ್ನಲಾಗಿದೆ. ಮೊಬೈಲ್ ಆನ್ ಮಾಡಿದ್ರೆ ಸಾಲಗಾರರ ಕರೆಗಳು ನಿರಂತರವಾಗಿ ಬರ್ತಾ ಇದ್ವು, ಹೀಗಾಗಿ ಮನೆಯ ವೈಫೈ ಬಳಕೆ ಮಾಡಿಕೊಂಡು ವಾಟ್ಸಾಪ್ ಕಾಲ್ ಮಾಡ್ತಿದ್ರು ಎನ್ನಲಾಗಿದೆ, ಸದ್ಯ ಗುರುಪ್ರಸಾದ್ ಬಳಸ್ತಿದ್ದ ಫೋನ್, ಟ್ಯಾಬ್ಗಳನ್ನು ಎಫ್ಎಸ್ಎಲ್ಗೆ ಕಳುಹಿಸಿಲಾಗಿದೆ. ಇನ್ನು ಗುರುಪ್ರಸಾದ್ 3 ಕೋಟಿಗೂ ಅಧಿಕ ಸಾಲ ಮಾಡಿಕೊಂಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.

ಒಟ್ಟಾರೆ ನಟ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಕೋಟಿ ಕೋಟಿ ಸಾಲ ಮಾಡಿಕೊಂಡಿದ್ದೇ ಕಾರಣ ಅನ್ನೋದು ಪ್ರಾಥಮಿಕ ತನಿಖೆಯಿಂದ ಹೊರಬಂದಿದೆ. ಆದ್ರೆ ಗುರುಪ್ರಸಾದ್ ಸಾವಿಗೆ ನಿಖರ ಕಾರಣ ಬೇರೆ ಏನಾದ್ರೂ ಇದ್ಯಾ ಅನ್ನೋದು ಪೊಲೀಸರ ಸಂಪೂರ್ಣ ತನಿಖೆ ಬಳಿಕವಷ್ಟೇ ಬಯಲಾಗಬೇಕಿದೆ.

Related Articles

Back to top button
error: Content is protected !!