ಕರಾವಳಿ

ಹುಲಿ ವೇಷ ಹಾಕುವೆ ಎಂದು ಹೇಳಿ ತೆರಳಿದ್ದ ವ್ಯಕ್ತಿ ನಾಪತ್ತೆ

Views: 46

ವಿಟ್ಲ: ಹುಲಿ ವೇಷ ಹಾಕಲು ಇದೆ ಎಂದು ಮನೆಯಲ್ಲಿ ಹೇಳಿ ಹೋದ ವ್ಯಕ್ತಿ ನಾಪತ್ತೆಯಾಗಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಟ್ಲ ಪಳಿಕೆ ಅನ್ನಮೂಲೆ ನಿವಾಸಿ ಸುಂದರ್ ನಾಯ್ಕ್ (55) ನಾಪತ್ತೆಯಾದವರು.

ಸುಂದರ್ ನಾಯ್ಕ್ ಕೂಲಿ ಕೆಲಸ ಮಾಡಿಕೊಂಡಿದ್ದು, ದಸರಾ ಹಬ್ಬದ ಪ್ರಯುಕ್ತ ವೇಷ ಹಾಕುತ್ತಿದ್ದರು. ತಾನು ದಸರಾ ಹಬ್ಬಕ್ಕೆ ಹುಲಿ ವೇಷ ಹಾಕುತ್ತೇನೆ ಅದಕ್ಕಾಗಿ ವಿಟ್ಲ ಠಾಣೆಗೆ ಹೋಗಿ ಅನುಮತಿ ಪಡೆಯುತ್ತೇನೆ ಎಂದು ಹೇಳಿದ್ದು.ಸುಂದರ್ ನಾಯ್ಕ್ ಅವರ ಪತ್ನಿ ಸಂಜೆ ಮನೆಗೆ ಬಂದಾಗ ಪತಿ ಇರಲಿಲ್ಲ ವೇಷ ಹಾಕಿ ಹಬ್ಬ ಮುಗಿದ ನಂತರ ಮನೆಗೆ ಬರಬಹುದು ಎಂದು ನಿರೀಕ್ಷೆಯಲ್ಲಿದ್ದರು. ಮರಳಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಸಂಬಂಧಿಕರಲ್ಲಿ ನೆರೆಹೊರೆಯವರಲ್ಲಿ ವಿಚಾರಿಸಿದ್ದಾರೆ. ಎಲ್ಲಿಯೂ ಪತ್ತೆಯಾಗದೆ ಕಾಣೆಯಾಗಿದ್ದಾರೆ. ಪತ್ನಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ

Related Articles

Back to top button
error: Content is protected !!