ಸಾಂಸ್ಕೃತಿಕ

ರೇಣುಕಾಸ್ವಾಮಿ ಪತ್ನಿಗೆ ಮುಂದಿನ ತಿಂಗಳು ಮಗು ಜನನ:ದರ್ಶನ್ ಗ್ಯಾಂಗ್‌ಗೆ ಶಿಕ್ಷೆ ವಿಧಿಸಲು ಕುಟುಂಬಸ್ಥರ ಒತ್ತಾಯ

Views: 119

ಚಿತ್ರದುರ್ಗ: ರೇಣುಕಾಸ್ವಾಮಿ ಕ್ರೂರ ಸಾವಿನ ಪ್ರಕರಣದ ವಿಚಾರಣೆ ಕೋರ್ಟ್‌ನಲ್ಲಿ ಮುಂದುವರಿದಿದೆ. 17 ಆರೋಪಿಗಳ ಪೈಕಿ ಇಂದಿಗೆ ಐವರು ಜಾಮೀನಿನ ಮೇಲೆ ಬಿಡುಗಡೆ ಆಗುತ್ತಿದ್ದಾರೆ. ಆದರೆ A1, A2 ಪವಿತ್ರಾ ಗೌಡ, ದರ್ಶನ್ ಅವರ ಮನವಿ ನ್ಯಾಯಾಲಯ ನಿರಾಕರಿಸಿದೆ. ದರ್ಶನ್ ಹಾಗೂ ಪವಿತ್ರಾ ಅವರಿಗೆ ಇನ್ನಷ್ಟು ದಿನ ಜೈಲುವಾಸ ಖಾಯಂ ಆಗಿದೆ.

ದರ್ಶನ್, ಪವಿತ್ರಾ ಅವರ ಜಾಮೀನಿನ ತೀರ್ಪಿನ ಹಿನ್ನೆಲೆಯಲ್ಲಿ ರೇಣುಕಾಸ್ವಾಮಿ ಕುಟುಂಬಸ್ಥರು ಪ್ರತಿಕ್ರಿಯೆ ನೀಡಿದ್ದಾರೆ. ಭಾವುಕರಾಗಿರುವ ರೇಣುಕಸ್ವಾಮಿ ತಂದೆ ಕಾಶಿನಾಥ್ ಅವರು ನ್ಯಾಯಾಂಗದ ಬಗ್ಗೆ ನನಗೆ ಗೌರವ ಇದೆ. ಪೊಲೀಸರು ಪ್ರಕರಣದಲ್ಲಿ ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ. ನ್ಯಾಯಾಂಗದ ತೀರ್ಪು ಸ್ವಾಗತಿಸುತ್ತೇನೆ ಎಂದು ಕಣ್ಣೀರು ಹಾಕಿದ್ದಾರೆ.

ಮೃತ ರೇಣುಕಾಸ್ವಾಮಿ ಚಿಕ್ಕಪ್ಪ ಷಡಕ್ಷರಯ್ಯ ಅವರು ಕೋರ್ಟ್ ತೀರ್ಪಿನ ಬಳಿಕ ಮಾತನಾಡಿದ್ದಾರೆ. ನ್ಯಾಯಾಂಗ ವ್ಯವಸ್ಥೆ ಮೇಲೆ ನಮಗೆ ಭರವಸೆ ಹೆಚ್ಚಾಗಿದೆ. ಸಾಮಾನ್ಯ ಜನರಿಗೂ ನ್ಯಾಯ ಸಿಗುವ ಭರವಸೆ ಮೂಡಿದೆ. ದೇಶದ ಸಂವಿಧಾನ ಆ ರೀತಿಯಾಗಿದೆ. ನ್ಯಾಯಾಲಯ‌ ನ್ಯಾಯವನ್ನು ಎತ್ತಿ ಹಿಡಿದಿದೆ. ತಪ್ಪಿತಸ್ಥರು ಯಾರೇ ಇದ್ದರು ಅವರಿಗೆ ಶಿಕ್ಷೆ ಹಾಗೆ ಆಗುತ್ತೆ ಅನ್ನೋ ಭರವಸೆ ಇದೆ. ಮುಂದಿನ‌ ದಿನಗಳಲ್ಲಿ ಅದೇ ಆಗುತ್ತೆ ಅನ್ನೋ‌ ಭರವಸೆ ಇದೆ ಎಂದಿದ್ದಾರೆ.

ಇನ್ನು, ನಮ್ಮ ಹುಡುಗ ಈಗಾಗಲೇ ನಮ್ಮನ್ನು ಬಿಟ್ಟು ಹೋಗಿದ್ದಾನೆ. ತಪ್ಪಿತಸ್ಥರಿಗೆ ಸಿಗುವ ಶಿಕ್ಷೆಯಲ್ಲಿ‌ ನಮ್ಮ ಹುಡುಗನನ್ನು ನೋಡ್ತೀವಿ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇ ಬೇಕು ಅನ್ನೋದು ನಮ್ಮ ಒಕ್ಕೂರೊಲ ಆಗ್ರಹವಾಗಿದೆ. ಸರ್ಕಾರ ಶೀಘ್ರಗತಿಯಲ್ಲಿ ಈ ಕೇಸ್ ವಿಚಾರಣೆ ಮಾಡಬೇಕು. ಕೊಲೆ ಮಾಡಿದವರಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

 

Related Articles

Back to top button
error: Content is protected !!