ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ: ನವರಾತ್ರಿ ಪ್ರಯುಕ್ತ “ಐಗಿರಿ ನಂದಿನಿ'”ಸಾಮೂಹಿಕ ಗೀತ ಗಾಯನ

Views: 424
ಕುಂದಾಪುರ:ನಾಡಿನಾದ್ಯಂತ ನವರಾತ್ರಿ ಅತ್ಯಂತ ಸಂಭ್ರಮ ಸಡಗರದ ಹಬ್ಬ. ದಸರಾ ಉತ್ಸವದ ಆಚರಣೆಯ ಒಂದು ಅಂಗ ನವರಾತ್ರಿ. ಶರನ್ನವರಾತ್ರಿ ಎಂತಲೂ ಕರೆಯುತ್ತಾರೆ. ನವರಾತ್ರಿಯ ಸಮಯದಲ್ಲಿ ದುರ್ಗಾದೇವಿಯನ್ನು 9 ರೂಪಗಳಲ್ಲಿ ಪೂಜಿಸಿ ಆರಾಧಿಸಲಾಗುತ್ತದೆ.
‘ಶಿಷ್ಟ ರಕ್ಷಣೆ ದುಷ್ಟ ಸಂಹಾರ’ ಎಂಬಂತೆ ರೂಪ ತಾಳಿದ ದೇವಿಯನ್ನು ಚಾಮುಂಡೇಶ್ವರಿ, ದುರ್ಗೆ, ಬನಶಂಕರಿ ಎಂದು ಮೊದಲಾದ ನಾಮಾವಳಿಗಳಿಂದ ಸ್ತುತಿಸಲಾಗುತ್ತದೆ. ನವರಾತ್ರಿಯ ಮಹತ್ವವನ್ನು ತಿಳಿಸುವ ಉದ್ದೇಶದಿಂದ ದೇವಿಯ 9 ಅವತಾರದ ವಿಶೇಷತೆಯನ್ನು ಮಕ್ಕಳಿಗೆ ನೀಡುವ ಸಲುವಾಗಿ ಸಂಸ್ಥೆಯಲ್ಲಿ ದೇವಿಯ ಶಕ್ತಿ ಸ್ವರೂಪವನ್ನು ಸಾರುವ ‘ಐಗಿರಿ ನಂದಿನಿ’ ಗೀತ ಗಾಯನವನ್ನು ಭಕ್ತಿ ಪೂರ್ವಕವಾಗಿ ಹಮ್ಮಿಕೊಳ್ಳಲಾಯಿತು.
ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ, ಸುಜ್ಞಾನ್ ಪದವಿ ಪೂರ್ವ ಕಾಲೇಜು ಮತ್ತು ವಿದ್ಯಾರಣ್ಯ (ಲಿಟ್ಲ್ ಸ್ಟಾರ್) ಆಂಗ್ಲ ಮಾಧ್ಯಮ ಶಾಲೆಯಲ್ಲಿ ನವರಾತ್ರಿಯ ಪ್ರಯುಕ್ತ ಹಮ್ಮಿಕೊಂಡ ಈ ಗೀತ ಗಾಯನ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪಚಂದ್ರ ಶೆಟ್ಟಿ , ಖಜಾಂಚಿ ಭರತ್ ಶೆಟ್ಟಿ , ಸುಜ್ಞಾನ್ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ರಂಜನ್ ಬಿ ಶೆಟ್ಟಿ ಹಾಗೂ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಪ್ರದೀಪ್ ಕೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.