ಶಿಕ್ಷಣ

ಬೇಸಿಗೆ  ಶಿಬಿರ

Views: 143

ಕುಂದಾಪುರ : ಸಂತ ಪಿಯುಸಿ ಇಗರ್ಜಿಯ ಸಭಾಭವನದಲ್ಲಿ ಮಕ್ಕಳಿಗೆ ಮೂರು ದಿನಗಳ ಬೇಸಿಗೆ ರಜೆ ಶಿಬಿರ ವನ್ನು ಇಗರ್ಜಿಯ ಧರ್ಮಗುರು ವಂದನೀಯ ಆಲ್ಬರ್ಟ್ ಕ್ರಾಸ್ತಾ ರವರು ಏರ್ಪಡಿಸಿದ್ದರು. ಒಂದರಿಂದ ದ್ವಿತೀಯ ಪಿಯುಸಿ ತನಕದ 85 ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ತ್ರಾಸಿ ಡಾನ್ ಬಾಸ್ಕೋ ವಿದ್ಯಾಲಯದ ಸಹಾಯಕ ಪ್ರಾಂಶುಪಾಲರಾದ ವಂದನೀಯ ರೊನಾಲ್ಡ್ ವಾಜ್ ರವರು ಹಾಗೂ ಹಾಸನ ಪ್ರಾಂತ್ಯದ ಧರ್ಮಭಗಿನಿ ಡಾಕ್ಟರ್ ಸೇವ್ರಿನ್ ಮಿನೆಜಸ್ ರವರು ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ಅಲ್ಲದೆ ಅವರ ವ್ಯಕ್ತಿತ್ವ ವಿಕಸನದ ಮಾಹಿತಿಗಳನ್ನು ನೀಡಿ ಗುಂಪು ಚಟುವಟಿಕೆಗಳ ಮೂಲಕ ಮಕ್ಕಳನ್ನು ಹುರಿದುಂಬಿಸಿ ಭವಿಷ್ಯಕ್ಕೆ ಉತ್ತಮ ನಾಂದಿಯನ್ನು ಹಾಕಿದರು. ಈ ಕಾರ್ಯಕ್ರಮದಲ್ಲಿ ಇಗರ್ಜಿಯ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಜೇಮ್ಸ್ ಡಿ ಮೆಲ್ಲೋ, ಕಾರ್ಯದರ್ಶಿ ರೇಷ್ಮಾ ಡಿಸೋಜಾ, 20 ಆಯೋಗಗಳ ಸಂಯೋಜಕಿ ಲೀನಾ ತಾವರೊ ಅವರು, ಕ್ರೈಸ್ತ ಶಿಕ್ಷಣ ಸಂಚಾಲಕಿ ಗ್ಲೀಮ ಗೊನ್ಸಾಲ್ವಿಸ್ ಹಾಗೂ ಕ್ರೈಸ್ತ ಶಿಕ್ಷಣ ಶಿಕ್ಷಕಿಯರು ಮತ್ತು ಧರ್ಮಭಾಗಿನಿಯರು ಉಪಸ್ಥಿತರಿದ್ದರು.

Related Articles

Back to top button