ಗುರುಕುಲ ಪಬ್ಲಿಕ್ ಶಾಲೆಯ ಹಳೆ ವಿದ್ಯಾರ್ಥಿ, ಭಾರತೀಯ ಸೇನೆಯ ಲೆಫ್ಟಿನೆಂಟ್ ಭರತ ಬಾಬು ದೇವಾಡಿಗ ಅವರಿಗೆ ಸನ್ಮಾನ

Views: 127
ಕುಂದಾಪುರ: ಗುರುಕುಲ ಶಿಕ್ಷಣ ಸಂಸ್ಥೆಯ ಹೆಮ್ಮೆಯ ಹಳೆ ವಿದ್ಯಾರ್ಥಿ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿರುವ ಭರತ ಬಾಬು ದೇವಾಡಿಗ ಅವರಿಗೆ ಸಂಸ್ಥೆಯ ವತಿಯಿಂದ ಸನ್ಮಾನ ನೀಡಲಾಯಿತು.
ನಮ್ಮ ಸಂಸ್ಕೃತಿಯ ಗತವೈಭವ ಕಂಡಾಗ ಅಲ್ಲಿ ಪ್ರಾರಂಭದಲ್ಲಿ ಕಾಣಸಿಗುವುದು ಸೈನಿಕರ ಮಹತ್ವ. ಭಾರತೀಯ ಸೈನ್ಯ ನಮಗೆ ಹೆಮ್ಮೆಯ ವಿಷಯ, ಸಂಸ್ಥೆಯ ಹಳೆ ವಿದ್ಯಾರ್ಥಿ ಎನ್ನುವುದು ನಮ್ಮೆಲ್ಲರ ಖುಷಿಯ ಸಂಗತಿಯಾಗಿದೆ.
ತಂದೆ ತಾಯಿ ಗುರುಗಳಿಗೆ ಗೌರವಿಸಬೇಕು , ಅವರೇ ನಮ್ಮ ಜೀವನದಲ್ಲಿ ತಿರುವು ನೀಡಬಲ್ಲ ವಿಶೇಷ ವ್ಯಕ್ತಿಗಳು,ಇವರ ಮಾರ್ಗದರ್ಶನದಿಂದ ಬದುಕಿನ ಉನ್ನತಿಯನ್ನು ಕಾಣಲು ಸಾಧ್ಯ.ಇವರಲ್ಲದೆ ಶೇರ್ಖಾನ್ ಇನ್ನಿತರ ವ್ಯಕ್ತಿಗಳ ಜೀವನ ಕಥೆ ಸ್ಪೂರ್ತಿಯನ್ನು ನೀಡಿದೆ .ಈ ಸ್ಥಾನದ ಅನುಭವಕ್ಕೆ ಇವೆಲ್ಲವೂ ಕಾರಣವಾಗಿದ್ದು ನೀವೆಲ್ಲ ದೃಢ ಮನಸ್ಸಿನಿಂದ ಅಣಿಯಾಗಬೇಕು .ಜೀವನ ಎಂಬುದು ಸುಲಭದ ಮಾತಲ್ಲ, ಸವಾಲುಗಳಿಂದ ಕೂಡಿರುತ್ತದೆ . ದೈಹಿಕವಾಗಿ ,ಮಾನಸಿಕವಾಗಿ ಸದೃಢರಾಗಿರಬೇಕು ಎಂದು ತನ್ನ ಶಾಲೆಯ ದಿನ , ತರಬೇತಿಯ ಅನುಭವಗಳನ್ನು ಮಕ್ಕಳಲ್ಲಿ ಹೇಳಿ ಅವರ ಸ್ಪೂರ್ತಿಯ ಕ್ಷಣಗಳಿಗೆ ಕಾರಣರಾದರು.
ಗುರುಕುಲ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲರಾದ ಶ್ರೀ.ಸುನಿಲ್ ಪ್ಯಾಟ್ರಿಕ್ ರವರು ಸೇನೆಯ ಮಹತ್ವ ಹೇಳುವುದರ ಜೊತೆಗೆ ವಿದ್ಯಾರ್ಥಿಗಳು ಸಾಧನೆಯತ್ತ ಮುಖ ಮಾಡಿ ಹೆತ್ತವರಿಗೆ, ಶಾಲೆಗೆ ಕೀರ್ತಿ ತರಬೇಕೆಂದು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.
ವಿದ್ಯಾರ್ಥಿಯ ಈ ಸಾಧನೆಯನ್ನು ಗುರುತಿಸಿ ಶಾಲಾ ಆಡಳಿತ ಮಂಡಳಿಯ ಜಂಟಿ ಕಾರ್ಯ ನಿರ್ವಾಹಕರಾದ ಶ್ರೀಯುತ ಸುಭಾಶ್ಚಂದ್ರ ಶೆಟ್ಟಿ ದಂಪತಿಗಳು ಗೌರವಿಸಿ, ಸನ್ಮಾನಿಸಿದರು.
ಪ್ರೌಢಶಾಲಾ ಸಂಯೋಜಕಿಯಾದ ಶ್ರೀಮತಿ ಸುಷ್ಮಾ ಸ್ವಾಗತಿಸಿ, ವಂದಿಸಿದರು.