ಶಿಕ್ಷಣ
ಎಕ್ಸೆಲ್ ಪ. ಪೂ ಕಾಲೇಜು ಗುರುವಾಯನಕೆರೆ ಪಿಯುಸಿ ಸಾಧಕರು

Views: 0
ಮಂಗಳೂರು: ಎಕ್ಸೆಲ್ ಪದವಿ ಪೂರ್ವ ಕಾಲೇಜು ಗುರುವಾಯನಕೆರೆ 2023 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 99.76 ಪಲಿತಾಂಶ ಲಭಿಸಿದೆ.
ಒಟ್ಟು 426 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 9 ವಿದ್ಯಾಥಿ೯ಗಳು ರಾಜ್ಯ ಮಟ್ಟದ ಶ್ರೇಣಿ ಪಡೆದಿರುತ್ತಾರೆ. 265 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇಗ೯ಡೆಯಾಗಿದ್ದು, 154 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇಗ೯ಡೆಯಾಗಿದ್ದಾರೆ. ಶೇ. 95 ಕ್ಕಿಂತಲೂ ಹೆಚ್ಚು ಅಂಕ ಪಡೆದವರು 41 ವಿದ್ಯಾರ್ಥಿಗಳು, ಶೇ. 90 ಕ್ಕಿಂತಲೂ ಹೆಚ್ಚು 183 ವಿದ್ಯಾರ್ಥಿಗಳು, ಶೇ. 85 ಕ್ಕಿಂತಲೂ ಹೆಚ್ಚು 265 ವಿದ್ಯಾಥಿ೯ಗಳು ವಿಶೇಷ ಸಾಧನೆಗೈದು ಕಾಲೇಜಿಗೆ ಕೀತಿ೯ತಂದಿದ್ದಾರೆ.
ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಉಪನ್ಯಾಸಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.