ಕರಾವಳಿಯ ಮೋಹಕ ಬೆಡಗಿ ಕೃತಿ ಶೆಟ್ಟಿ ಬ್ಯೂಟಿಯ ಸಿಕ್ರೇಟ್ ಏನು?

Views: 118

ಉಪ್ಪೇನ’ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಮೋಡಿ ಮಾಡಿರುವ ನಟಿ ಕೃತಿ ಮೂಲತಃ ಕರಾವಳಿ ಕರ್ನಾಟಕದವರು, ಮಾತೃಭಾಷೆ ತುಳು ಆಗಿದ್ದರೂ ಕೂಡ ಕನ್ನಡ ಭಾಷೆಯ ಮೇಲೆ ಅವರಿಗೆ ಅಭಿಮಾನವಿದೆ. ಅದರಂತೆ ಉತ್ತಮ ಕಥೆ ಸಿಕ್ಕರೆ ಖಂಡಿತವಾಗಿಯೂ ಕನ್ನಡ ಚಿತ್ರದಲ್ಲಿ ನಟಿಸುತ್ತೇನೆ ಎಂದಿದ್ದಾರೆ.

2019ರಲ್ಲಿ ‘ಉಪ್ಪೆನ’ ಸಿನಿಮಾಕ್ಕೆ ಶೂಟಿಂಗ್ ನಡೆದಿತ್ತು. ಆ ಸಿನಿಮಾದಲ್ಲಿ ವಿಜಯ್ ಸೇತುಪತಿ ನಾಯಕಿಯ ತಂದೆ ಪಾತ್ರ ಮಾಡಿದ್ದರೆ, ನಾಯಕಿಯಾಗಿ ಕೃತಿ ಶೆಟ್ಟಿ ನಟಿಸಿದ್ದರು. ಆಗಿನ್ನೂ ಕೃತಿಗೆ 17-18 ವರ್ಷ ಅಷ್ಟೇ. ಕೊನೆಗೆ ಆ ಸಿನಿಮಾವು 2021ರಲ್ಲಿ ತೆರೆಕಂಡು ಸೂಪರ್ ಹಿಟ್ ಎನಿಸಿಕೊಂಡಿತ್ತು. ಅದಕ್ಕೂ ಮುನ್ನ ವಿಜಯ್ ಸೇತುಪತಿ ನಟನೆಯ ‘ಡಿಎಸ್‌ಪಿ’ ಎಂಬ ಸಿನಿಮಾವನ್ನು ಪೊನ್‌ರಾಮ್ ನಿರ್ದೇಶನ ಮಾಡುತ್ತಿದ್ದರು. ಆ ಸಿನಿಮಾಕ್ಕಾಗಿ ನಾಯಕಿಯ ಹುಡುಕಾಟ ಆರಂಭವಾಗಿತ್ತು.

ಪ್ರತಿ ದಿನ ಬೆಳಗ್ಗೆ ಸ್ಲೋ ಆಗಿ ಆರಂಭಿಸುವುದಕ್ಕೆ ಇಷ್ಟ ಪಡುತ್ತೀನಿ. ರೆಡಿಯಾಗುವುದು ತುಂಬಾನೇ ಸಿಂಪಲ್….ಮುಖ ತೊಳೆದುಕೊಂಡ ಮೇಲೆ ಲಿಪ್ ಟಿಂಟ್, ಕಣ್ಣು ರೆಪ್ಪೆಗಳನ್ನು ಕರ್ಲ್ ಮಾಡುವುದು ಅಷ್ಟೇ…ರೆಡಿಯಾಗಿ ಹೊರಡಲು ಸಜ್ಜಾಗಿರುವೆ. ಡ್ಯೂವಿ ಸ್ಕಿನ್, ಲೈಟ್ ಮೇಕಪ್ ಇಷ್ಟ ಪಡುತ್ತೀನಿ. ಬಾಕ್ಸ್ ರೀತಿಯಲ್ಲಿ ಐ ಬ್ರೋ ಮಾಡಿಸಿಕೊಳ್ಳುವುದು ಒಂದು ಟ್ರೆಂಡ್ ಆಗಿತ್ತು. ಅದನ್ನು ನಾನು ಕೂಡ ಟ್ರೈ ಮಾಡೋಣ ಅಂದುಕೊಂಡು ಆನಂತರ ಸುಮ್ಮನಾದೆ. ಫ್ರೀ ಮಾಡಿಕೊಂಡು ಪಿಲಾಟೆ, ಏರಿಯಲ್ ಯೋಗ ಮತ್ತು ಡ್ಯಾನ್ಸ್ ಮಾಡುತ್ತೀನಿ’ ಎಂದಿದ್ದಾರೆ ಕೃತಿ.

ಉಪ್ಪೇನ ನಂತರ ನಾನಿ ಜತೆ ‘ಶ್ಯಾಮ್ ಸಿಂಗ ರಾಯ್’ ಹಾಗೂ ನಾಗ ಚೈತನ್ಯ ಎದುರು ‘ಬಂಗಾರ್ರಾಜು’ ಸಿನಿಮಾಗಳಲ್ಲಿ ನಟಿಸಿ ತೆಲುಗು ಪ್ರೇಕ್ಷಕರಿಗೆ ಹತ್ತಿರವಾದರು. ಈ ಎರಡು ಸಿನಿಮಾಗಳಲ್ಲಿನ ಆಕೆಯ ಅಭಿನಯಕ್ಕೆ ಸೂಪರ್ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಇತ್ತೀಚೆಗೆ, ಕೃತಿ ಶೆಟ್ಟಿ ರಾಮ್ ಪೋತಿನೇನಿ ಅಭಿನಯದ ವಾರಿಯರ್ ಚಿತ್ರದ ಮೂಲಕ ಪ್ರೇಕ್ಷಕರನ್ನು ಸ್ವಾಗತಿಸಿದರು.

ಹಾಸನದಲ್ಲಿ ಹುಟ್ಟಿ ಮುಂಬೈನಲ್ಲಿ ಓದಿ ಬೆಳೆದ ನಟಿ ಕೃತಿ ಶೆಟ್ಟಿ ಸದ್ಯ ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಂಟರ ಮನೆ ಹುಡುಗಿ ಕೃತಿ ನಾಯಕಿಯಾಗಿ ನಟಿಸಿದ ಮೊದಲ ಚಿತ್ರದಲ್ಲೇ ಗೆದ್ದಿದ್ದರು. ಆದರೆ ಬಳಿಕ ಆಕೆ ನಟಿಸಿದ ಸಿನಿಮಾಗಳು ಗೆಲ್ಲಲೇಯಿಲ್ಲ. ಈ ಬಗ್ಗೆ ಆಕೆ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸದ್ಯ ತಮಿಳಿನ ಮೂರು ಸಿನಿಮಾಗಳಲ್ಲಿ ಕೃತಿ ಶೆಟ್ಟಿ ಬ್ಯುಸಿಯಾಗಿದ್ದಾರೆ. ಒಂದು ಮಲಯಾಳಂ ಸಿನಿಮಾ ಕೂಡ ಕೈಯಲ್ಲಿದೆ. ‘ಉಪ್ಪೆನ’ ಚಿತ್ರದಲ್ಲಿ ನಟಿಸಿ ರಾತ್ರೋರಾತ್ರಿ ಜನಪ್ರಿಯತೆ ಗಳಿಸಿದ ಆಕೆ ಬಳಿಕ ಸೈಲೆಂಟ್ ಆಗಿಬಿಟ್ಟರು. ಸ್ಟಾರ್ ನಟರ ಜೊತೆ ನಟಿಸೋ ಅವಕಾಶ ಸಿಕ್ಕರೂ ಬಾಕ್ಸಾಫೀಸ್‌ನಲ್ಲಿ ಸಿನಿಮಾಗಳು ಸದ್ದು ಮಾಡಲಿಲ್ಲ

ಅವರು ಸಾಲು ಸಾಲು ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುವ ಕುರಿತು ನಟಿ ಮಾತನಾಡಿದ್ದಾರೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆ ಎಂದರೆ ಇಷ್ಟ, ಅವರೊಂದಿಗೆ ಸಿನಿಮಾ ಮಾಡಲು ರೆಡಿ ಎಂದು ಕೃತಿ ಮಾತನಾಡಿದ್ದಾರೆ.

ಯಾರೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತೀರಿ ಎಂದು ಎದುರಾದ ಪ್ರಶ್ನೆಗೆ ನಟಿ ಥಟ್ ಅಂತ ರಕ್ಷಿತ್ ಶೆಟ್ಟಿ ಹೆಸರು ಹೇಳಿದ್ದಾರೆ. ರಕ್ಷಿತ್ ಸರ್ ಅವರ ಆ್ಯಕ್ಟಿಂಗ್ ಎಂದರೆ ತುಂಬಾ ಇಷ್ಟ. ಬಹಳ ಸಮಯದಿಂದ ಅವರ ಕೆಲಸವನ್ನು ಗಮನಿಸುತ್ತಿದ್ದೇನೆ. ಅವರ ಜೊತೆ ಕೆಲಸ ಮಾಡಲು ಆಸಕ್ತಿಯಿದೆ. ಅವಕಾಶ ಸಿಕ್ಕರೆ ನಟಿಸುತ್ತೇನೆ ಎಂದು ‘ಉಪ್ಪೇನ’ ನಟಿ ಮಾತನಾಡಿದ್ದಾರೆ. ಅವರ ಮಾತು ಕೇಳಿ ಕನ್ನಡಿಗರು ಮೆಚ್ಚುಗೆ ಸೂಚಿಸಿದ್ದಾರೆ.

ಅಂದಹಾಗೆ, ಸೆ.12ರಂದು ‘ಎಆರ್‌ಎಂ’ (ARM) ಸಿನಿಮಾ ರಿಲೀಸ್ ಆಗಿದೆ. ಮಲಯಾಳಂ ಸಿನಿಮಾದಲ್ಲಿ ನಾಯಕಿಯಾಗಿ ಕೃತಿ ಈ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ್ದಾರೆ. ಅವರ ನಟನೆಗೆ ಪ್ರಶಂಸೆ ವ್ಯಕ್ತವಾಗಿದೆ.







